ವಿಷಕಾರಿ ಮದ್ಯಸೇವಿಸಿ 20 ಮಂದಿ ಸಾವು

newsics.comಪಾಣಿಪತ್​(ಹರಿಯಾಣ): ಸೋನಿಪತ್​​​ನಲ್ಲಿ ನಡೆದ ವಿಷಕಾರಿ ಮದ್ಯಸೇವನೆ ಪ್ರಕರಣ ಮರೆಯುವ ಮುನ್ನವೇ ಪಾಣಿಪತ್’ನಲ್ಲಿ ವಿಷಕಾರಿ ಮದ್ಯ ಸೇವಿಸಿ 20 ಮಂದಿ ಸಾವನ್ನಪ್ಪಿದ್ದಾರೆ.ಇಲ್ಲಿನ ಧನಸೋಲಿ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ವಿಷಪೂರಿತ ಮದ್ಯ ಸೇವಿಸಿ 20 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ಸೋನಿಪತ್​​​​​​​​​ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.ಘಟನೆ ಕುರಿತು ಈವರೆಗೂ ಪ್ರಕರಣ ದಾಖಲಾಗಿಲ್ಲ. ಮೃತಪಟ್ಟವರ ಪೈಕಿ ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.