Tuesday, August 9, 2022

ಕೊರೋನಾ ನಿರ್ಲಕ್ಷಿಸಿದರೆ 20 ಲಕ್ಷ ಜನ ಬಲಿ; WHO ಎಚ್ಚರಿಕೆ

Follow Us

newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರಿದಿರುವ ವೇಳೆಯಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿ ನೀಡಿದೆ.
ಕೊರೋನಾ ಮಣಿಸಲು ಪರಿಣಾಮಕಾರಿ ಲಸಿಕೆ ಬಳಕೆಗೆ ಬರುವ ಮೊದಲೇ ಜಗತ್ತಿನಲ್ಲಿ ಸಾವಿನ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕಳವಳ ವ್ಯಕ್ತಪಡಿಸಿದೆ.
ತ್ವರಿತ, ಅಂತಾರಾಷ್ಟ್ರೀಯ ಕ್ರಮತೆಗೆದುಕೊಳ್ಳದೆ ಹೋದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ ಎಂದು ಡಬ್ಲ್ಯೂಎಚ್‌ಒದ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ಹೇಳಿದ್ದಾರೆ.
ಕೊರೋನಾ ಸೋಂಕು ನಿಯಂತ್ರಿಸಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಪ್ರಯತ್ನಿಸದಿದ್ದರೆ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ 20 ಲಕ್ಷದ ಗಡಿ ಮೀರಲಿದೆ ಎಂದು ಎಚ್ಚರಿಸಿದೆ.
ಕೊರೋನಾ ಸೋಂಕಿಗೆ ಈಗಾಗಲೇ ಪ್ರಪಂಚದಲ್ಲಿ ಬಲಿಯಾದವರ ಸಂಖ್ಯೆ 10 ಲಕ್ಷದ ಸನಿಹದಲ್ಲಿದೆ. ಈ ವೇಳೆ ಸಂಘಟಿತರಾಗಿ ಹೋರಾಟ ಮಾಡದಿದ್ದರೆ ಭೀಕರ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವದಲ್ಲಿ ಇದುವರೆಗೆ 3.23 ಕೋಟಿ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 9,84,068 ಮಂದಿ ಬಲಿಯಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!