ನವದೆಹಲಿ: 2019 ನಿರ್ಗಮನದ ಹಾದಿಯಲ್ಲಿದೆ. ಹೊಸ ವರ್ಷ ಸ್ವಾಗತಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ವರ್ಷದ ಆರಂಭದಿಂದ ಹಿಡಿದು ಅಂತ್ಯದ ವರೆಗಿನ ಘಟನೆಗಳನ್ನು ನೋಡಿದರೆ ಎಲ್ಲದರ ಹಿಂದೆ ಕಂಡು ಬರುವುದು ಒಬ್ಬ ವ್ಯಕ್ತಿಯ ಚಿತ್ರಣ . ಅವರು ಬೇರೇ ಯಾರೂ ಅಲ್ಲ. ಕೇಂದ್ರ ಗೃಹ ಸಚಿವ , ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಮೋದಿ-01ರ ಅವಧಿಯಲ್ಲಿ ಅಮಿತ್ ಶಾ ಪಕ್ಷದ ವಿಷಯದಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಎರಡನೆ ಇನ್ನಿಂಗ್ಸ್ ನಲ್ಲಿ ಅಮಿತ್ ಶಾ ಪಕ್ಷ ಮತ್ತು ಸರ್ಕಾರದ ಧ್ವನಿಯಾಗಿದ್ದಾರೆ. ಪಕ್ಷದಲ್ಲಿ ಪರಮೋಚ್ಚ ನಾಯಕ. ಸರ್ಕಾರದಲ್ಲಿ ಪ್ರಭಾವ ಶಾಲಿ ಧ್ವನಿ. ಈ ಎರಡೂ ಅಂಶಗಳ ಸಮ್ಮಿಳನವೇ 2019ರ ಅಮಿತ್ ಶಾ
ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು, ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ಕಾನೂನು ತಿದ್ದುಪಡಿ, ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಸ್ತಾಪ ಎಲ್ಲವೂ ಕೇಂದ್ರ ಗೃಹ ಖಾತೆ ಜೊತೆ ನೇರಾ ನೇರ ಸಂಬಧ ಹೊಂದಿದೆ. ಬದ್ದ ರಾಜಕೀಯ ವೈರಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ಹೇಳಲು ಸಮರ್ಥರಿರುವ ಅಮಿತ್ ಶಾ, ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಎಳ್ಳಷ್ಟು ರಾಜೀ ಮಾಡಲು ಸಿದ್ದರಿಲ್ಲ. ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದತಿಗೆ ವಿರೋಧ ವ್ಯಕ್ತಪಡಿಸಿದ್ದ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಸ್ವಾತಂತ್ರ್ಯ್ದದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ಕಾನೂನು ತಿದ್ದುಪಡಿ ಹೋರಾಟ ಹಿಂಸಾಚಾರಕ್ಕೆ ತಿರುಗಿದಾಗ ಅಮಿತ್ ಶಾ ಧೈರ್ಯ ಕಳೆದುಕೊಳ್ಳಲಿಲ್ಲ. ಅಸ್ಸಾಂನ ಗುವಾಹಟಿಯಲ್ಲಿ ಪೊಲೀಸ್ ಆಯುಕ್ತರ ಬದಲವಾಣೆಗೆ ಸೂಚಿಸಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಸುಧಾರಿಸಿದರು. ಹಿಂಸಾಚಾರ ತಣ್ಣಾಗಾಯಿತು. ಇದು ಅಮಿತ್ ಶಾ ಅವರ ಕಾರ್ಯ ವೈಖರಿ
ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳು ಯಶಸ್ಸು ಕಂಡಿವೆ. ಇದರ ಹಿಂದಿನ ಶಕ್ತಿ ಮತ್ತ ತಂತ್ರಗಾರಿಕೆ ಹೆಣೆದ ಚಾಣಾಕ್ಷ್ಯ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಪ್ರಭಾವಶಾಲಿ ಸಚಿವರಾಗಿರುವ ಅಮಿತ್ ಶಾ ಅವರಿಗೆ ಸಿಎಎ 2020ರಲ್ಲೂ ಸವಾಲೊಡ್ಡುವ ಸಾಧ್ಯತೆಗಳಿವೆ. ಈ ಎಲ್ಲ ಸವಾಲುಗಳನ್ನು ಅಮಿತ್ ಶಾ ಹೇಗೆ ನಿಭಾಯಿಸುತ್ತಾರೆ ಎಂಬುದೇ ಹೊಸ ವರ್ಷದ ಕುತೂಹಲ