ದೆಹಲಿ: 2019ನೇ ವರ್ಷ ಭಾರತದ ಇತಿಹಾಸದಲ್ಲಿ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಗಿ ಉಳಿಯಲಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಕೆಲ ಮಹತ್ವದ ನಿರ್ಣಯ, ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತ ತನ್ನದೇ ಆದ ಪ್ರತ್ಯೇಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಕೆಲ ಮಹತ್ವದ ನಿರ್ಣಯ, ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತ ತನ್ನದೇ ಆದ ಪ್ರತ್ಯೇಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಇನ್ನೊಂದೆಡೆ ಈ ಸಾಲಿನಲ್ಲಿ ನಮ್ಮ ದೇಶದ ಅನೇಕ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಗ್ರಗಣ್ಯರನ್ನು ಕಳೆದುಕೊಂಡು ಬಡವಾಗಿದೆ. ಈ ವರ್ಷದ ಮಹತ್ವದ ಬೆಳವಣಿಗೆಗಳ ಹಿನ್ನೋಟ ಇಲ್ಲಿದೆ
ವರ್ಷದ ಆರಂಭದಲ್ಲೇ ದೇಶಾದ್ಯಂತ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪು ಕಿಚ್ಚು ಹತ್ತಿಸಿತ್ತು. ಜನವರಿ 2ರಂದು ಶಬರಿಮಲೆ ದೇಗುಲಕ್ಕೆ ಕನಕದುರ್ಗ ಮತ್ತು ಬಿಂದು ಎಂಬುವರು ಮೊದಲ ಬಾರಿಗೆ ಪ್ರವೇಶಿಸಿದರು.
ನಂತರ ಫೆ. 14ರಂದು ದೇಶ ಬಹುದೊಡ್ಡ ದುರಂತಕ್ಕೆ ಸಾಕ್ಷಿಯಾಯಿತು. ಫೆ 14ರಂದು ನಡೆದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮಂಡ್ಯದ ಯೋಧ ಸೇರಿ 40 ಸೈನಿಕರು ಹುತಾತ್ಮ. ಇದಕ್ಕೆ ಪ್ರತಿಯಾಗಿ ಭಾರತ ಸೇನೆ, ಫೆ.26ರಂದು ಪಾಕಿಸ್ತಾನದ ಬಾಲಕೋಟ್ ಉಗ್ರ ತಾಣದ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಪಾಕ್ ಸೇನೆಯ ಸೆರೆ ಸಿಕ್ಕರು. ನಂತರ ಭಾರತದ ಒತ್ತಡಕ್ಕೆ ಮಣಿದು, ಅವರನ್ನು ಬಿಡುಗಡೆಗೊಳಿಸಲಾಯಿತು.
ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು, ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಭಾರಿ ಬಹುಮತದಿಂದ ಚುಕ್ಕಾಣಿ ಏರಿತು. ಜುಲೈ 3 ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.ನಂತರ ಆ ಸ್ಥಾನಕ್ಕೆ ಅವರ ತಾಯಿ ಸೋನಿಯಾ ಗಾಂಧಿ ಆಯ್ಕೆಯಾದರು. ಜುಲೈ 5ರಂದು ದೇಶದ ಮೊದಲ ಪೂರ್ಣಪ್ರಮಾಣದ ಅರ್ಥ ಮಂತ್ರಿಯಿಂದ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಿದರು.
ಎರಡನೇ ಬಾರಿ ಅಧಿಕಾರಕ್ಕೇರಿದ ಬಿಜೆಪಿ ತಮ್ಮ ಮೊದ ಸಂಸತ್ ಸಭೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವಂತಹ ಮತ್ತೊಂದು ಐತಿಹಾಸಿಕ ಮಸೂದೆ ಮಂಡಿಸಿತು. ಇದರಿಂದ ಭಾರತದ ಭಾಗವಾಗಿದ್ದರೂ ಪ್ರತ್ಯೇಕವಾಗಿದ್ದ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ ವಿಭಜಿಸಿತು. ಜೊತೆಗೆ, ತ್ರಿವಳಿ ತಲಾಕ್ ಅನ್ನು ಅಪರಾಧೀಕರಿಸುವ ಮಸೂದೆಗೆ ಕೂಡ ಅಂಗೀಕಾರ ದೊರೆಯಿತು.
ಈ ನಡುವೆ ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಪಕ್ಷಗಳ ದಾಳವಾಗಿದ್ದ ಹಾಗೂ ಹಿಂದೂ ಜನರ ಆಶಯವಾಗಿದ್ದ ಅಯೋಧ್ಯಾ ರಾಮಮಂದಿರದ ತೀರ್ಪು ಹೊರಬಿದ್ದು, ಸುಪ್ರೀಂಕೋರ್ಟ್ ದೇಗುಲ ನಿರ್ಮಿಸಲು ಅನುಮತಿ ನೀಡಿತು.
ಈ ವಿವಾದಗಳೆಲ್ಲಾ ತಣ್ಣಗಾಗುವಷ್ಟರಲ್ಲಿ ಮತ್ತೊಂದು ಸಂಸತ್ ಅಧಿವೇಶನ ನಡೆಸಿದ ಬಿಜೆಪಿ, ನೆರೆ ರಾಷ್ಟ್ರಗಳಲ್ಲಿನ ರಾಷ್ಟ್ರೀಯ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ರಾಷ್ಟ್ರೀಯ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯಿತು. ಇದನ್ನು ವಿರೋಧಿಸಿದ ದೇಶಾದ್ಯಂತ ಭಾರಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಆದರೆ, ಸರ್ಕಾರ ಮಾತ್ರ ತನ್ನ ನಿಲುವಿಗೆ ಬದ್ಧವಾಗಿಯೇ ಇದೆ.
ಗಣ್ಯರ ಸಾವು:
ಜ. 29ರಂದು ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ ನಿಧನರಾದರು. ಮಾ. 14ರಂದು ದೇಶದ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಇಹಲೋಕ ತ್ಯಜಿಸಿದರು. ಮಾ. 17ರಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನರಾದರು. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದರು.