Saturday, November 27, 2021

21 ದಿನ ಭಾರತ ಲಾಕ್ ಡೌನ್

Follow Us

ನವದೆಹಲಿ: ಕೊರೋನಾ ತ಼ಡೆಗಟ್ಟುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ. ದೇಶದ ಜನರನ್ನು ರಕ್ಷಿಸಲು ಇದು ಅನಿವಾರ್ಯ ಎಂದು ಪ್ರಧಾನಿ ಘೋಷಿಸಿದ್ದಾರೆ.
ಇನ್ನು ಮುಂಬರುವ 21 ದಿನಗಳು ನಮಗೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಕರೋನವೈರಸ್ ಸೋಂಕಿನ ಚಕ್ರವನ್ನು ಮುರಿಯಲು ಕನಿಷ್ಠ 21 ದಿನಗಳ ಸಮಯ ಬಹಳ ಮುಖ್ಯ’ ಎಂದು ಅವರು ಹೇಳಿದರು. ವಿಶ್ವದ ಸಮರ್ಥ ದೇಶಗಳನ್ನು ಕೊರೋನಾ ಸಂಕಷ್ಟಕ್ಕೆ ತಂದೊಡ್ಡಿದೆ. ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಕೊರೋನಾದಿಂದ ಪಾರಾಗಲು ಅದರ ಸರಪಳಿಯನ್ನು ತುಂಡರಿಸುವುದು ಒಂದೇ ಮಾರ್ಗ. ಸಾಮಾಜಿಕ ಅಂತರವೊಂದೇ ಮಾರ್ಗ. ಪ್ರತಿಯೊಬ್ಬರ ಜೀವವೂ ಅತಿಮುಖ್ಯವಾಗಿದ್ದು, ಎಲ್ಲರ ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅಗತ್ಯವಾಗಿದೆ. ನಾನು ಕೈ ಮುಗಿದು ಕೇಳುತ್ತೇನೆ, ಎಲ್ಲೇ ಇದ್ದರೂ ಅಲ್ಲಿಯೇ ಇರಿ. ಯಾರೂ ಮನೆಗಳಿಂದ ಹೊರಗಡೆ ಬರಬಾರದರು. ಇದು ನಮ್ಮೆಲ್ಲರ ಪ್ರಾಥಮಿಕ ಆದ್ಯತೆ ಆಗಿದೆ. ಮುಂದಿನ 21ದಿನಗಳ ಕಾಲ ಮನೆಗಳಲ್ಲೇ ಇರಬೇಕೆಂದು ಪ್ರಧಾನಿ ಕರೆನೀಡಿದರು. ನಾನು ಪ್ರಧಾನಿಯಾಗಿ ಅಲ್ಲ, ಮನೆಯ ಸದಸ್ಯನಾಗಿ ಕೇಳಿಕೊಳ್ಳುತ್ತಿದ್ದೇನೆ. ಎಲ್ಲರೂ 3 ವಾರ ಮನೆಗಳಲ್ಲೇ ಇರಿ, ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ ಎಂದು ಪ್ರಧಾನಿ ಮನವಿ ಮಾಡಿದರು. ಪ್ರತಿಯೊಬ್ಬರು ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ, ಯಾರೂ ರಸ್ತೆಗೆ ಇಳಿಯಬೇಡಿ ಎಂದರು.
ಇನ್ನು ಇಟಲಿ, ಸ್ಪೇನ್, ಅಮೆರಿಕ, ಚೀನಾ, ಜರ್ಮನಿ ಸೇರಿದಂತೆ ಹಲವು ದೇಶಗಳು ಮಾರಕ ಕೊರೋನಾದಿಂದ ತತ್ತರಿಸಿ ಹೋಗಿವೆ. ಈ ರಾಷ್ಟ್ರಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದರೂ ಕೊರೋನಾ ಹೊಡೆತ ಜನತೆಯನ್ನು ಜರ್ಜರಿತರನ್ನಾಗಿಸಿವೆ. ಈ ಸೋಂಕು 3 ದಿನದಲ್ಲೇ ಸಾವಿರಾರು ಜನರಿಗೆ ತಲುಪುತ್ತದೆ. ಕೇವಲ ವಾರದಲ್ಲಿ ಲಕ್ಷಾಂತರ ಜನತೆಗೆ ತಗುಲುತ್ತಿದೆ. ಪ್ರತಿಯೊಬ್ಬರು ಸರ್ಕಾರಿ ಆದೇಶವನ್ನು ಶೇ.100ರಷ್ಟು ಪಾಲಿಸಿದರೆ ಈ ಮಾರಕ ಕೊರೋನಾ ಸೋಂಕನ್ನು ಗೆಲ್ಲಬಹುದು ಎಂದು ಪ್ರಧಾನಿ ಕರೆನೀಡಿದರು.
ಮಾರಕ ಸೋಂಕು ವಿರುದ್ಧ ಹೋರಾಡುತ್ತಿರುವ ಡಾಕ್ಟರ್ಸ್, ನರ್ಸ್ ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ, ಪೊಲೀಸರು ಸೇರಿದಂತೆ ಹಲವರು ಶ್ರಮಿಸುತ್ತಿದ್ದು, ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಪ್ರಧಾನಿ ಬಣ್ಣಿಸಿದರು.

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!