newsics.com
ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ಗೆ ರಾಜಸ್ಥಾನ್ ರಾಯಲ್ಸ್ 217 ರನ್’ಗಳ ಟಾರ್ಗೆಟ್ ನೀಡಿದೆ.
ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ. ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಈ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಸೇರಿಸಿತು.
ಆರಂಭಿಕ ಆಟಗಾರರಾದ ಯಶಸ್ವಿ ಜೈ ಸ್ವಾಲ್, 6, ಸ್ವೀವ್ ಸ್ಮಿತ್ 69, ಸಂಜು ಸ್ಯಾಮ್ಸನ್ 74, ರಾಬಿನ್ ಉತ್ತಪ್ಪ 5, ರಾಹುಲ್ ತೇವಾಟಿಯ 10, ರಿಯಾನ್ ಪರಾಗ್ 6, ಟಾಮ್ ಕರನ್ 10, ಜೋಫ್ರಾ ಆರ್ಚರ್ 27 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ದೀಪಕ್ ಚಹಾರ್ 1, ಸ್ಯಾಮ್ ಕರನ್ 3, ಲುಂಗಿ ಎನ್ಗಿಡಿ, ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್’ನಿಂದ ಚೆನ್ನೈ ಸೂಪರ್ ಕಿಂಗ್ಸ್’ಗೆ 217 ರನ್ ಟಾರ್ಗೆಟ್
Follow Us