ಮುಂಬೈ: ಮಾರಕ ಕೊರೋನಾ ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ದಾಳಿ ಮುಂದುವರಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 232 ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಸೋಂಕಿತ ಪೊಲೀಸರ ಸಂಖ್ಯೆ 9449ಕ್ಕೆ ತಲುಪಿದೆ.
ಇವರಲ್ಲಿ 1932 ಪೊಲೀಸರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಕ ಕೊರೋನಾಕ್ಕೆ ಓರ್ವ ಸಿಬ್ಬಂದಿ ಕೂಡ ಕಳೆದ 24 ಗಂಟೆ ಅವಧಿಯಲ್ಲಿ ಬಲಿಯಾಗಿದ್ದಾನೆ. ಕೊರೋನಾದಿಂದ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ ಪೊಲೀಸರ ಸಂಖ್ಯೆ 103ಕ್ಕೆ ತಲುಪಿದೆ.
ಮುಂಬೈ ಮಹಾನಗರದಲ್ಲಿ ಅತ್ಯಧಿಕ ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ನಿರ್ಬಂಧಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆಯಿಂದಾಗಿ ಪೊಲೀಸರು ಸೋಂಕಿತೆ ತುತ್ತಾಗುತ್ತಿದ್ದಾರೆ