newsics.com
ವೈದ್ಯಕೀಯ ಪರೀಕ್ಷೆಯಲ್ಲಿ ಪುರುಷ ಎಂದು ಸಾಬೀತಾದ ಬಳಿಕ ಹುದ್ದೆ ಕಳೆದುಕೊಂಡಿದ್ದ 23 ವರ್ಷದ ಅಭ್ಯರ್ಥಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2 ತಿಂಗಳೊಳಗಾಗಿ ನೇಮಕಾತಿ ಅಂತಿಮಗೊಳಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದರಲ್ಲಿ ಅರ್ಜಿದಾರರ ಯಾವುದೇ ತಪ್ಪು ಕಾಣುತ್ತಿಲ್ಲ. ಅವರು ತಮ್ಮ ವೃತ್ತಿ ಜೀವನದಲ್ಲಿ ಮಹಿಳೆಯಾಗಿಯೇ ಮುಂದುವರಿಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.