Wednesday, November 30, 2022

ಪಶ್ಚಿಮ ಬಂಗಾಳದಲ್ಲಿ 25 ಬಿಜೆಪಿ ಶಾಸಕರ ಪಕ್ಷಾಂತರ ವದಂತಿ

Follow Us

newsics.com

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 75 ಬಿಜೆಪಿ ಶಾಸಕರ ಪೈಕಿ 25 ಮಂದಿ ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ಶಾಸಕರ ನಿಯೋಗದಲ್ಲಿ ಕೇವಲ 50 ಶಾಸಕರು ಮಾತ್ರ ಭಾಗವಹಿಸಿದ್ದಾರೆ.

ಉಳಿದ 25 ಮಂದಿ ಈ ನಿಯೋಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಸಹಜವಾಗಿಯೇ ಬಿಜೆಪಿ ಅತೃಪ್ತ ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ನಡೆದ ಹಾಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಪರೇಷನ್ ನಡೆಸಿದರೆ 25 ಶಾಸಕರು ಟಿಎಂಸಿ ಸೇರುವ ಸಾಧ್ಯತೆ ಇದೆ.

ಮಮತಾ ಬ್ಯಾನರ್ಜಿ ವಿರುದ್ಧ ಜಯ ಸಾಧಿಸಿರುವ ಸುವೇಂದು ಅಧಿಕಾರಿಗೆ ಬಿಜೆಪಿ ಮನ್ನಣೆ ನೀಡುತ್ತಿರುವುದು ಈ ಅತೃಪ್ತ ಶಾಸಕರ ಸಿಟ್ಟಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಎರಡು ತಿಂಗಳಲ್ಲಿ ಎರಡು ಬಾರಿ ಎರಡು ತಿಂಗಳ ಮಗುವಿನ ಅಪಹರಣ: 24 ಗಂಟೆ ಭದ್ರತೆ

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...

ಕೊರೋನಾ ಬಳಿಕ ಕೇರಳದಲ್ಲಿ ಇದೀಗ ದಡಾರ ಭೀತಿ

newsics.com ತಿರುವನಂತಪುರಂ:  ಕೇರಳ ಮತ್ತು ಮಹಾರಾಷ್ಟ್ರದಲ್ಲಿ ದಡಾರ ರೋಗ ವ್ಯಾಪಕವಾಗಿ ಹರಡುತ್ತಿದೆ. ಚಿಕ್ಕಮಕ್ಕಳು ಹೆಚ್ಚಾಗಿ ಇದರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾದ ಬಳಿಕ ಕೇರಳದಲ್ಲಿ ಇದೀಗ ದಡಾರ ಹಾವಳಿ ಹೆಚ್ಚಾಗಿದೆ. ಕೇರಳದ  ಮಲಪ್ಪುರಂ ಜಿಲ್ಲೆಯಲ್ಲಿ  130 ದಡಾರ...
- Advertisement -
error: Content is protected !!