ನವದೆಹಲಿ: ಭಾರತೀಯ ಮೂಲದ 26 ಹೊಸ ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಶುಕ್ರವಾರ ಬಿಡುಗಡೆಯಾದ ಆಕ್ಸ್ ಫರ್ಡ್ ಅಡ್ವಾನ್ಸ್ಡ್ ಲರ್ನರ್ಸ್ ಡಿಕ್ಷನರಿಯ 10ನೇ ಆವೃತ್ತಿಯಲ್ಲಿ 384 ಭಾರತೀಯ ಮೂಲದ ಪದಗಳಿವೆ. ಆಧಾರ್, ಚಾವಲ್, ಡಬ್ಬಾ, ಹರತಾಲ್, ಶಾದಿ ಪದಗಳು ಸೇರಿವೆ. ಅಲ್ಲದೆ ಚಾಟ್‌ಬೊಟ್, ಫೇಕ್‌ನ್ಯೂಸ್ ಹಾಗೂ ಮೈಕ್ರೊಪ್ಲಾಸ್ಟಿಕ್‌ನಂತಹ ಸಾವಿರಕ್ಕೂ ಅಧಿಕ ಇತ್ತೀಚಿನ ದಿನಗಳಲ್ಲಿ ಬಳಸಲ್ಪಡುವ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ.
ಈ ಆವೃತ್ತಿಯಲ್ಲಿ 26 ಹೊಸ ಭಾರತೀಯ ಇಂಗ್ಲಿಷ್ ಪದಗಳಿವೆ, 22ಮುದ್ರಿತ ನಿಘಂಟಿನಲ್ಲಿವೆ. ಉಳಿದ ನಾಲ್ಕು ಡಿಜಿಟಲ್ ಆವೃತ್ತಿಯಲ್ಲಿವೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ವ್ಯವಸ್ಥಾಪಕ ನಿರ್ದೇಶಕಿ (ಶಿಕ್ಷಣ ವಿಭಾಗ) ಫಾತಿಮಾ ದಾದಾ ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ನಿಘಂಟಲ್ಲಿ 26 ಭಾರತೀಯ ಹೊಸ ಪದ
Follow Us