Wednesday, November 30, 2022

28 ವರ್ಷಕ್ಕೆ 24 ಮಹಿಳೆಯರನ್ನು ಮದುವೆಯಾದ ಭೂಪ!!

Follow Us

newsics.com

ಕೋಲ್ಕತ್ತಾ: ಅಪರಿಚಿತ ಮಹಿಳೆಯರ ಸ್ನೇಹ ಬೆಳೆಸಿ, ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ ಆರೋಪಿಯೊಬ್ಬನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಅಸಾಬುಲ್ ಮೊಲ್ಲಾ 24 ಮದುವೆಯಾಗಿ ಅಚ್ಚರಿ ಮೂಡಿಸಿದ ವ್ಯಕ್ತಿ. ಹಾಗಂತ ಆತನ 24 ಮಡದಿಯರೂ ಜೊತೆಗಿಲ್ಲ. ಒಬ್ಬಳನ್ನು ಮದುವೆಯಾಗಿ ಬಿಡೋದು ಮತ್ತೊಬ್ಬಳನ್ನು ಕಟ್ಟಿಕೊಳ್ಳೋದು ಈತನ ಕಾಯಕ. ಇನ್ನೇನು 25 ಮದುವೆಯಾಗಿ ಗಿನ್ನೆಸ್ ದಾಖಲೆ ಬರೆಯುವ ಹೊಸ್ತಿಲಲ್ಲೇ ಒಬ್ಬಳು ಹೆಂಡತಿ ಈತನ ಬಣ್ಣ ಬಯಲು ಮಾಡಿದ್ದಾಳೆ.

ಅಸಾಬುಲ್ ಮೊಲ್ಲಾ ನಿಂದ ವಂಚನೆಗೊಳಗಾದ ಪತ್ನಿ ದೂರು ನೀಡಿದ್ದಳು. ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದರು. ವಿಚಾರಣೆ ವೇಳೆ ಅಸಾಬುಲ್ 24 ಬಾರಿ ಮದುವೆಯಾಗಿರುವ ವಿಷಯ ಬಯಲಾಗಿದೆ.

ಈತ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನಕಲಿ ಗುರುತಿನ ಚೀಟಿಯೊಂದಿಗೆ ಹೆಸರು ಬದಲಿಸಿಕೊಂಡಿದ್ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ನಕಲಿ ಹೆಸರಿನ ಮೂಲಕವೇ ಅಷ್ಟೊಂದು ಮದುವೆಯಾಗಿರುವ ಅನುಮಾನ ಇದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಇನ್ನಿಲ್ಲ!

ಮತ್ತಷ್ಟು ಸುದ್ದಿಗಳು

vertical

Latest News

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...
- Advertisement -
error: Content is protected !!