newsics.com
ಮುಂಬೈ: ಕಳ್ಳತನ ಆರೋಪದಡಿಯಲ್ಲಿ ಇಲ್ಲಿನ ಗೊರೇಗಾಂವ್ ಉಪನಗರದಲ್ಲಿ ಮುಂಬೈ ಪೊಲೀಸರು ಇಬ್ಬರು ಕಿರುತೆರೆ ನಟಿಯರನ್ನು ಬಂಧಿಸಿದ್ದಾರೆ.
ಸುರಭಿ ಶ್ರೀವಾಸ್ತವ್ (25) ಮತ್ತು ಮೊಹ್ಸಿನಾ ಶೇಖ್ (19) ಬಂಧಿತ ನಟಿಯರು. ಇವರು 3.28 ರೂ. ಲಕ್ಷ ಕದ್ದ ಆರೋಪದಲ್ಲಿ ಬಂಧಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಾವ್ಧಾನ್ ಇಂಡಿಯಾ’ ಮತ್ತು ‘ಕ್ರೈಮ್ ಪ್ಯಾಟ್ರೋಲ್’ ಸೇರಿದಂತೆ ವಿವಿಧ ಧಾರಾವಾಹಿ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಐಷಾರಾಮಿ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಂಡಿದ್ದ ಈ ನಟಿಯರು ಮಹಿಳೆಯೊಬ್ಬರ ಲಾಕರ್‌ನಿಂದ ಹಣ ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.