Wednesday, August 4, 2021

30 ವರ್ಷ 3 ಕಿ.ಮೀ. ಕಾಲುವೆ ತೋಡಿ ನೀರು ಹರಿಸಿದ ಆಧುನಿಕ ಭಗೀರಥ!

Follow Us

newsics.com
ಪಾಟ್ನಾ: ಇವರ ಕಾರ್ಯ ನೋಡಿದರೆ ಬಿಹಾರದ ದಶರಥ ಮಾಂಝಿ ನೆನಪಾಗುತ್ತಾರೆ. ಜತೆಗೆ ‘ಮಾಂಝಿ ದಿ ಮೌಂಟೇನ್ ಮ್ಯಾನ್’ ಸಿನಿಮಾ ನೆನಪಾಗುತ್ತದೆ.
ಬೆಟ್ಟದಿಂದ ಬಿದ್ದು ತನ್ನ ಹೆಂಡತಿ ಸತ್ತ ನಂತರ ಮಾಂಝಿ 22 ವರ್ಷ ಸತತ ಗುದ್ದಲಿ, ಪಿಕಾಸಿ ಹಿಡಿದು ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ್ದರು. ಈಗ ಅದೇ ಬಿಹಾರದಲ್ಲಿ ಮಾಂಝಿಯಂಥ ಮತ್ತೊಬ್ಬರು ಮಹಾ ಸಾಹಸ ಮಾಡಿದ್ದಾರೆ.
ಗಯಾದಿಂದ 80 ಕಿಮೀ ದೂರದಲ್ಲಿರುವ ಕೋತಿಲಾವ ಗ್ರಾಮದ ಲೋಂಗಿ ಭುಯನ್ ಏಕಾಂಗಿಯಾಗಿ ಕೆಲಸ ಮಾಡಿ ತನ್ನೂರಿಗೆ ಕಾಲುವೆ ನಿರ್ಮಿಸಿದ್ದಾರೆ. 30 ವರ್ಷ ಕಾಲ ಒಬ್ಬರೇ ಕೆಲಸ ಮಾಡಿ 3 ಕಿ.ಮೀ. ಉದ್ದದ ಕಾಲುವೆ ತೋಡಿದ್ದಾರೆ. ಗ್ರಾಮಸ್ಥರಿಗೆ ಸಹಾಯಕವಾಗಲಿ ಎಂದು ಈ ಕಾಲುವೆ ತೋಡಿ ನೀರು ಹರಿಸಿದ್ದಾರೆ. ಬೆಟ್ಟದಿಂದ ಹರಿಯುವ ನೀರು ಈ ಕಾಲುವೆಯಲ್ಲಿ ಹರಿದು ಗ್ರಾಮದ ಸಮೀಪದ ಕೆರೆಯಲ್ಲಿ ಶೇಖರಣೆಯಾಗುತ್ತದೆ.
ನಾನು ಊರಿಗಾಗಿ ಕಾಲುವೆ ತೋಡುತ್ತಿದ್ದೆ. ಅದೇ ವೇಳೆ ಗ್ರಾಮದ ಜನರು ಹಣ ಸಂಪಾದನೆಗೆ ನಗರಕ್ಕೆ ಹೋಗುತ್ತಿದ್ದರು.
ಯಾರೂ ಕೂಡ ನನ್ನ ಕಾರ್ಯಕ್ಕೆ ಕೈಜೋಡಿಸಲಿಲ್ಲ. ದನ ಮೇಯಿಸುತ್ತಲೇ ಕಾಲುವೆ ತೊಡುತ್ತಿದ್ದೆ ಎಂದು ಭುಯನ್ ಹೇಳಿದ್ದಾರೆ.
ಸುತ್ತಲೂ ದಟ್ಟವಾದ ಕಾಡು, ಪರ್ವತಗಳಿಂದ ಕೂಡಿರುವ ಪ್ರದೇಶ ಕೋತಿಲಾವ ಗ್ರಾಮ. ಕೃಷಿ ಮತ್ತು ಪಶುಸಂಗೋಪನೆ ಇಲ್ಲಿನ ಜನರ ಪ್ರಮುಖ ಕಸುಬು. ಗ್ರಾಮದಲ್ಲಿನ ನೀರಿನ ಅಭಾವವಿದ್ದ ಕಾರಣ ಗ್ರಾಮಕ್ಕೆ, ಪ್ರಾಣಿಗಳಿಗೆ ನೆರವಾಗಲಿ ಎಂದು ಕಾಲುವೆ ತೋಡಿ ವ್ಯರ್ಥವಾಗಿ ಹರಿದುಹೋಗುವ ಮಳೆ ನೀರನ್ನು ಕೆರೆಗೆ ಸೇರುವಂತೆ ಮಾಡಿದ್ದೇನೆ ಎನ್ನುತ್ತಾರೆ, ಭುಯನ್.

ಕಾಶ್ಮೀರ ಸೇಬು ಉತ್ಪಾದನೆಯಲ್ಲಿ ಭಾರೀ ಕುಸಿತ

ಸೈಕ್ಲಿಂಗ್ ವೇಳೆ ಹೃದಯಾಘಾತ; ಮಾಜಿ ಶಾಸಕರ ಪುತ್ರ ಸಾವು

ಮತ್ತಷ್ಟು ಸುದ್ದಿಗಳು

Latest News

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ

newsics.com ಕೋಲಾರ : ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ‌ಮಾಡಿದ ಘಟನೆ ಕೋಲಾರದ ಮಾಲೂರು ಬಳಿ ನಡೆದಿದೆ....

ವಾಟ್ಸ್’ಆ್ಯಪ್ ನಲ್ಲಿನ್ನು ಒಂದು ಬಾರಿ ಫೋಟೋ, ವಿಡಿಯೋ ನೋಡಿದ ಬಳಿಕ ಮಾಯ

newsics.com ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸಿದೆ. ಈ ಬಾರಿ View Once ಎನ್ನುವ ಆಯ್ಕೆ ಪರಿಚಯಿದೆ. ವಾಟ್ಸ್ಆ್ಯಪ್ ಮೂಲಕ ಫೋಟೊ ಮತ್ತು ವಿಡಿಯೊಗಳನ್ನು view Once ಆಯ್ಕೆಯ ಮೂಲಕ...

29 ನೂತನ ಸಚಿವರ ಪ್ರಮಾಣ ವಚನ, ಭುಗಿಲೆದ್ದಿದೆ ಸ್ಥಾನ ವಂಚಿತರ ಆಕ್ರೋಶ

newsics.com ಬೆಂಗಳೂರು:  ದೆಹಲಿಯಲ್ಲಿ ಒಂದು ವಾರ ಕಾಲ ನಡೆದ ಸಮಾಲೋಚನೆ ಬಳಿಕ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 29 ಸದಸ್ಯರು ಸಚಿವರಾಗಿ ಪ್ರಮಾಣ ವಚನ...
- Advertisement -
error: Content is protected !!