Wednesday, January 27, 2021

33 ಲಕ್ಷ ಜನರಿಗೆ ಪ್ರವಾಹ ಸಂಕಷ್ಟ; 85 ಜನ, 51 ಪ್ರಾಣಿಗಳ ಸಾವು

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, 28 ಜಿಲ್ಲೆಗಳಲ್ಲಿ 33 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಳವಾರ ದಿಬ್ರುೂಗರ್​ ಜಿಲ್ಲೆಯಲ್ಲಿ ಮೂವರು, ಟಿನ್ಸುಕಿಯಾ ಮತ್ತು ಬಾರ್ಪೆಟಾದಲ್ಲಿ ತಲಾ ಇಬ್ಬರು, ಬಿಸ್ವಾನಾಥ್ ಮತ್ತು ಗೋಲಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 85 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ.
ಈವರೆಗೆ 102 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, ಕಾಜಿರಂಗದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ 51 ಪ್ರಾಣಿಗಳು ಮೃತಪಟ್ಟಿವೆ. ಒಟ್ಟು 1.28 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಮಹಾನಗರದಲ್ಲಿ ಕುಂಭ ದ್ರೋಣ ಮಳೆ

ಬಾರ್ಪೆಟಾದಲ್ಲಿ 5.50 ಲಕ್ಷ ಹಾಗೂ ಧುಬ್ರಿ, ಮೊರಿಗಾಂವ್ ಮತ್ತು ದಕ್ಷಿಣ ಸಲ್ಮರಾ ಜಿಲ್ಲೆಗಳಲ್ಲಿ ಕ್ರಮವಾಗಿ 4.11 ಲಕ್ಷ, 4.08 ಲಕ್ಷ, ಮತ್ತು 2.25 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಪಾಯ ಸ್ಥಿತಿಯಲ್ಲಿ ಬ್ರಹ್ಮಪುತ್ರ:
ಭಾರಿ ಮಳೆಗೆ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ನೀರು ನುಗ್ಗಿ ಹುಲಿ ಸೇರಿದಂತೆ ಇತರ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಾಣಿಗಳು ಜೀವ ರಕ್ಷಣೆಗಾಗಿ ಜನವಸತಿ ಪ್ರದೇಶಗಳಿಗೆ ಲಗ್ಗೆಯಿಟ್ಟಿವೆ. ರಾಯಲ್ ಬಂಗಾಳದ ಹುಲಿಯೊಂದು ಅಗೋರಟೋಲಿ ಅರಣ್ಯ ವ್ಯಾಪ್ತಿಯ ಕಂಡೋಲಿಮರಿ ಗ್ರಾಮಕ್ಕೆ ಬಂದಿತ್ತಿ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನೊಂದು ಹುಲಿ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಸುರಕ್ಷಿತ ಪ್ರದೇಶಕ್ಕೆ ತಲುಪಿದರೆ, ಮತ್ತೊಂದು ಹುಲಿ ರಾಷ್ಟ್ರೀಯ ಹೆದ್ದಾರಿ 37 ರ ಸಮೀಪ ಇದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನದ ಅಗರ್ತೋಲಿ ಶ್ರೇಣಿಯ ಸುಕಾನಿ ಶಿಬಿರದ ಬಳಿ ಒಂದು ವರ್ಷದ ಖಡ್ಗಮೃಗವನ್ನು ರಕ್ಷಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಯೋಧರ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ, ನಾಲ್ವರಿಗೆ ಗಾಯ

Newsics.com ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಶಂಶಿಪುರದಲ್ಲಿ ಉಗ್ರರು ಯೋಧರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಯೋಧರ ತಂಡ ರಸ್ತೆ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ವೇಳೆ...

ಬೇರೆ ಯುವತಿಯ ಜತೆ ಪತಿಯ ಅಶ್ಲೀಲ ಚಿತ್ರ: ಚೂರಿಯಿಂದ ಇರಿದ ಪತ್ನಿ

Newsics.com ಮೆಕ್ಸಿಕೋ: ತನ್ನ ಪತಿ ಬೇರೆ ಮಹಿಳೆಯ ಜತೆ ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ಭ್ರಮಿಸಿ ಪತ್ನಿ, ಪತಿ ಮೇಲೆ ಚೂರಿಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದು ನಡೆದದ್ದು ಮೆಕ್ಸಿಕೊದಲ್ಲಿ. ಪತಿ  ಜುವಾನ್  ಅವರ ಮೊಬೈಲ್...

ಕೊರೋನಾ ಸೋಂಕಿತರಾಗಿದ್ದ ಶೇಕಡ 96.91 ಮಂದಿ ಗುಣಮುಖ

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ   12, 689  ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.89, 527 ಕ್ಕೆ ತಲುಪಿದೆ.    ಕಳೆದ 24 ಗಂಟೆಯಲ್ಲಿ...
- Advertisement -
error: Content is protected !!