Tuesday, April 13, 2021

ಅಂಗವಿಕಲ ತಾಯಿ, ಪುಟ್ಟ ತಂಗಿಯೊಂದಿಗೆ 350 ಕಿಮೀ ಕ್ರಮಿಸಿದ ಬಾಲಕ!

ಕರ್ನೂಲ್: ಧೈರ್ಯ, ಇಚ್ಛಾಶಕ್ತಿ ಇದ್ದರೆ ಅಸಾಧ್ಯವಾದುದೂ ಸಾಧ್ಯವಾಗಿಸಬಹುದು ಎಂಬುದಕ್ಕೆ ಈ ಹತ್ತು ವರ್ಷದ ಬಾಲಕನೇ ಸಾಕ್ಷಿ.
ಈ ಬಾಲಕ ಶಾರೂಖ್ ವ್ಹೀಲ್ ಚೇರ್’ನಲ್ಲಿರುವ ತನ್ನ ಅಂಗವಿಕಲ ತಾಯಿ ಹಾಗೂ ಒಂದು ವರ್ಷದ ತಂಗಿಯ ಜತೆ ಕಾಲ್ನಡಿಗೆಯಲ್ಲೇ ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ 350 ಕಿ.ಮೀ. ಕ್ರಮಿಸಿದ್ದಾನೆ!
ತಾಯಿ ಕುಳಿತಿದ್ದ ವ್ಹೀಲ್ ಚೇರ್ ತಳ್ಳಿಕೊಂಡು ತಂಗಿಯನ್ನು ಎತ್ತಿಕೊಂಡು ಬೆಂಗಳೂರಿನಲ್ಲಿರುವ ತನ್ನ ಇತರ ಮೂವರು ಸಹೋದರ/ಸಹೋದರಿಯರ ಜತೆಗೂಡಲು ಹೈದರಾಬಾದ್’ನಿಂದ ಹೊರಟು ಕರ್ನೂಲ್’ಗೆ ಬರುವ ವೇಳೆಗೆ ಕರ್ನೂಲ್ ಪ್ರದೇಶದ ಸಬ್ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ರೆಡ್ಡಿ ಅವರಿಗೆ ಮಾಹಿತಿ ಸಿಕ್ಕಿತ್ತು. ಬಾಲಕ ಶಾರೂಖ್ ನ ಪಾಡನ್ನು ಗಮನಿಸಿದ ಪೊಲೀಸ್ ಅಧಿಕಾರಿ, ದ್ರೋಣಾಚಲಂ ಸೇವಾ ಸಮಿತಿಯ ಸಹಾಯದಿಂದ ಬೆಂಗಳೂರಿಗೆ ತಲುಪಿಸಿದ್ದಾರೆ.
ಶಾರೂಖ್’ನ ತಾಯಿ ಹಸೀನಾ ಉತ್ತರ ಪ್ರದೇಶದವರು. ಗಂಡನನ್ನು ಕಳೆದುಕೊಂಡ ಬಳಿಕ ತನ್ನ 5 ಮಕ್ಕಳೊಂದಿಗೆ ಹೈದರಾಬಾದ್’ಗೆ ಬಂದು ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮುನ್ನ ಆಕೆಯ 3 ಮಕ್ಕಳು ಪರಿಚಯಸ್ಥರೊಬ್ಬರು ಬೆಂಗಳೂರಿನ ಆಶ್ರಮದಲ್ಲಿ ಬಿಟ್ಟಿದ್ದರು. ಲಾಕ್ ಡೌನ್ ಪರಿಣಾಮ ಹೈದರಾಬಾದ್ ನಲ್ಲೇ ಸಿಲುಕಿಕೊಂಡರು. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಹಣವೂ ಇಲ್ಲದೇ ನರೇಂದ್ರ ಕುಮಾರ್ ರೆಡ್ಡಿ ಆತನ ತಂಗಿ, ಆತನ ತಾಯಿ ಹಸೀನ ಅವರು ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಹೊರಟಿದ್ದರು” ಎಂದು ದ್ರೋಣಾಚಲಂ ಸೇವಾ ಸಮಿತಿಯ ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!