newsics.com
ಪುರಿ: ಇಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನದ 351 ಸೇವಕರು ಮತ್ತು 53 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.
ಆಗಸ್ಟ್’ನಿಂದ ಇಲ್ಲಿಯವರೆಗೆ ದೇವಾಲಯದಲ್ಲಿ ಬರೋಬ್ಬರಿ 404 ಮಂದಿಗೆ ಸೋಂಕು ತಗುಲಿದೆ, ದೇಗುಲದ ಮೂವರು ಸಿಬ್ಬಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ದೇವಸ್ಥಾನ ಆಡಳಿತಾಧಿಕಾರಿ ಅಜಯ್ ಜೆನಾ ತಿಳಿಸಿದ್ದಾರೆ.
ದೇಗುಲದಲ್ಲಿ ಬಲಭದ್ರ, ದೇವಿ ಸುಭದ್ರಾ ಮತ್ತು ಜಗನ್ನಾಥ ದೇವನಿಗಾಗಿ ತಲಾ 13 ಪುರೋಹಿತರ ಗುಂಪು ನಿತ್ಯ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕಾಗುತ್ತದೆ. ಆದ್ದರಿಂದ ನಿತ್ಯವೂ 39 ಅರ್ಚಕರು ಮಾತ್ರವಲ್ಲದೆ ಇತರ ಅರ್ಚಕರ ಉಪಸ್ಥಿತಿಯೂ ಅಗತ್ಯವಾಗಿರುತ್ತದೆ ಎಂದು ಅಜಯ್ ಜೆನಾ ಹೇಳಿದ್ದಾರೆ.
ದೇಶದಲ್ಲಿ ಒಂದೇ ದಿನ 70, 589 ಮಂದಿಗೆ ಕೊರೋನಾ ಸೋಂಕು,776 ಬಲಿ
ಹೆಚ್ಚಿನ ಸೇವಕರು ಸೋಂಕಿಗೆ ಗುರಿಯಾಗಿದ್ದರಿಂದ ಅವರೆಲ್ಲ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಧಾರ್ಮಿಕ ವಿಧಿಗಳನ್ನು ನಡೆಸಲು ಸೇವಕರ ಕೊರತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರಿ ಜಿಲ್ಲೆಯಲ್ಲಿ ಈವರೆಗೆ 9,704 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಪುರಿ ಮುನಿಸಿಪಾಲಿಟಿ ಪ್ರದೇಶವೊಂದರಲ್ಲೇ 1,255 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ 52 ಸಾವುಗಳು ವರದಿಯಾಗಿವೆ.
ರಾಜ್ಯಕ್ಕೆ ಮತ್ತೊಂದು ಚೀನಾ ವೈರಸ್; ಇಬ್ಬರಲ್ಲಿ ಸೋಂಕು ಪತ್ತೆ
ರಾಜ್ಯದಲ್ಲಿ ಸದ್ಯಕ್ಕಿಲ್ಲ ಶಾಲಾ ಕಾಲೇಜು ಆರಂಭ