ರಾಯ್ಪುರ: ಇಲ್ಲಿನ ಇಕ್ಕಟ್ಟಾದ ಪಂಚಾಯತ್ ಭವನದಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು 40 ಹಸುಗಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.
ಈ ವಿಷಯವನ್ನು ಬಿಲಾಸ್ಪುರ ಜಿಲ್ಲೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ರಾಯ್ಪುರ ಗ್ರಾಮದ ಇಕ್ಕಟ್ಟಾದ ಪಂಚಾಯತ್ ಭವನದಲ್ಲಿ ಸರಪಂಚರೊಬ್ಬರು 60 ಜಾನುವಾರುಗಳನ್ನು ಕಳೆದ ಎರಡು ದಿನಗಳಿಂದ ಕಟ್ಟಿ ಹಾಕಿದ್ದರು. ಇವುಗಳಲ್ಲಿ 40 ಗೋವುಗಳು ಉಸಿರುಕಟ್ಟಿ ಮೃತಪಟ್ಟಿವೆ. 20 ಗೋವುಗಳನ್ನು ರಕ್ಷಿಸಲಾಗಿದೆ ಎಂದು ಡಾ. ಮಿಟ್ಟರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಗೊಂಡಿದೆ ಎಂದು ಬಿಲಾಸ್ಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ.
ರಾಯ್ಪುರದಲ್ಲಿ ಉಸಿರುಗಟ್ಟಿ 40 ಹಸು ಸಾವು
Follow Us