ನವದೆಹಲಿ: ಮಾರಕ ಕೊರೋನಾ ಇದುವರೆಗೆ ದೇಶದಲ್ಲಿ 86000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರಲ್ಲಿ ಸೈನಿಕರು ಕೂಡ ಸೇರಿದ್ದಾರೆ, ಮಾರಕ ಕೊರೋನಾದಿಂದಾಗಿ ಇದುವರೆಗೆ 41 ಸೈನಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ
ಇದೇ ವೇಳೆ ಸಶಸ್ತ್ರ ಪಡೆಗಳಲ್ಲಿ ಕೊರೋನಾ ತಡೆಗಟ್ಟಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಖ್ಯವಾಗಿ ಬ್ಯಾರಕ್ ಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ 2011 ಕೈದಿಗಳಿಗೆ ಕೊರೋನಾ ಸೋಂಕು ತಗುಲಿದೆ. ಆರು ಮಂದಿ ಕೈದಿಗಳು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ..
ಮಹಾರಾಷ್ಟ್ರದಲ್ಲಿ 416 ಜೈಲು ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ.
ಈ ಬೆಳವಣಿಗೆ ಮಧ್ಯೆ ಹೆಚ್ಚುತ್ತಿರುವ ಕೊರೋನಾ ಪ್ರಕರಣ ಹಿನ್ನೆಲೆಯಲ್ಲಿ ರಾಜಸ್ತಾನದಲ್ಲಿ ಅಜ್ಮೀರಾ ಸೇರಿದಂತೆ ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.