newsic.com
ಹೈದರಾಬಾದ್: 45 ಅಡಿ ಎತ್ತರದ ದುರ್ಗಾದೇವಿಯ ವಿಗ್ರಹವನ್ನು ಹೈದರಾಬಾದ್ ನ ಎಸಾಮಿಯಾ ಬಝಾರ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಇದು ಪರಿಸರ ಸ್ನೇಹಿ ವಿಗ್ರಹವಾಗಿದೆ.
ಹುಲ್ಲು, ಜೇಡಿಮಣ್ಣು, ಕೆಂಪು ಮರಳು ಮತ್ತು ವಾಟರ್ ಕಲರ್ ಬಳಸಿ ಈ ವಿಗ್ರಹ ತಯಾರಿಸಲಾಗಿದ್ದು, 20ಕ್ಕೂ ಹೆಚ್ಚು ಕಲಾವಿದರು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ವಿಗ್ರಹ ಪರಿಸರದ ಮೇಲೆ ಯಾವುದೇ ಹಾನಿಕಾರಕ ಪರಿಣಾಮ ಬೀರದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.