ನವದೆಹಲಿ: ಏರ್ ಇಂಡಿಯಾ ವಿಮಾನ ಸಂಸ್ಥೆ ತನ್ನ ನೌಕರರಿಗೆ ಐದು ವರ್ಷಗಳ ವೇತನರಹಿತ ಕಡ್ಡಾಯ ರಜೆ ನೀಡಿದೆ.
ಏರ್ ಇಂಡಿಯಾ ವಿಮಾನ ಸಂಸ್ಥೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ಈ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ 1975, ರಾಜ್ಯದಲ್ಲಿ 3176 ಮಂದಿಗೆ ಸೋಂಕು, 87 ಬಲಿ
ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ವೇತನ ಕಡಿತ, ವೇತನ ರಹಿತ ರಜೆ, ಉದ್ಯೋಗದಿಂದ ವಜಾ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿವೆ. ಹೀಗಾಗಿ ಏರ್ ಇಂಡಿಯಾ ವಿಮಾನ ಸಂಸ್ಥೆ ತಮ್ಮ ನೌಕರರಿಗೆ ಐದು ವರ್ಷಗಳ ವೇತನರಹಿತ ಕಡ್ಡಾಯ ರಜೆ ನೀಡಿದೆ ಎಂದರು.
ಉದ್ಯೋಗಿಯ ಗೈರು ಹಾಜರಿ, ಕಾರ್ಯ ನಿರ್ವಹಣೆ ಸಾಮರ್ಥ್ಯದ ಮೇಲೆ ಆರು ತಿಂಗಳು ಅಥವಾ 5 ವರ್ಷಗಳವರೆಗೆ ಸಿಬ್ಬಂದಿಯನ್ನು ವೇತನರಹಿತ ರಜೆಯ ಮೇಲೆ ಕಳುಹಿಸಬಹುದಾಗಿದೆ ಎಂದು ಆದೇಶದಲ್ಲಿ ರಾಜೀವ್ ಬನ್ಸಾಲ್ ತಿಳಿಸಿದ್ದಾರೆ.