Thursday, February 2, 2023

50 ಪೈಸೆ ವಸೂಲಾತಿಗೆ ನೋಟಿಸ್ ನೀಡಿದ ಬ್ಯಾಂಕ್

Follow Us

ಜುನ್ ಜುನ್, ರಾಜಸ್ತಾನ: 50 ಪೈಸೆ ಬಾಕಿ ಇರಿಸಿದ್ದ ಸಾಲಗಾರನೊಬ್ಬನಿಗೆ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ. ರಾಜಸ್ತಾನದ ಝುನ್ ಝುನ್ ಜಿಲ್ಲೆಯ ಕೇತ್ರಿ ಎಂಬಲ್ಲಿ ಈ ಘಟನೆ ವರದಿಯಾಗಿದೆ. ಜಿತೇಂದ್ರ ಸಿಂಗ್ ಎಂಬಾಂತ ಬ್ಯಾಂಕಿಗೆ 50 ಪೈಸೆ ಪಾವತಿಸದೇ ಸುಸ್ತಿದಾರನಾಗಿದ್ದ. ಲೋಕ ಅದಾಲತ್ ನಲ್ಲಿ ಕೂಡ ಭಾಗಿಯಾಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ. ಆದರೆ ಬಳಿಕ ಜಿತೇಂದ್ರ ಸಿಂಗ್ 50  ಪೈಸೆ  ಪಾವತಿಸಲು ಬ್ಯಾಂಕ್ ಗೆ ತೆರಳಿದಾಗ ಸಿಬ್ಬಂದಿ ಅದನ್ನು ಸ್ವೀಕರಿಸಲಿಲ್ಲ ಎಂದು ಆತನ ಪರ ವಕೀಲ ವಿಕ್ರಂ ಸಿಂಗ್ ಆರೋಪಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದು ಈ ನೋಟಿಸ್ ಜಾರಿಗೊಳಿಸಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಜಲ್ಲಿ ಕಟ್ಟು ಸ್ಪರ್ಧೆಗೆ ಅನುಮತಿ ನಿರಾಕರಣೆ: ಪೊಲೀಸರ ಮೇಲೆ ಕಲ್ಲು ತೂರಾಟ

newsics.com ಚೆನ್ನೈ: ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಜನರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಈ ಪ್ರಕರಣ ವರದಿಯಾಗಿದೆ. ರೊಚ್ಚಿಗೆದ್ದ...

ಅಮಿತ್ ಶಾ ಭೇಟಿ ಮಾಡಲು ದೆಹಲಿಗೆ ಹೊರಟ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಸಿ ಡಿ ಹಗರಣ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಸಂಬಂಧ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಗೃಹ...

ಭಯೋತ್ಪಾದಕರ ಜತೆ ನಂಟು ಆರೋಪ: ಎನ್ ಐ ಎ ಯಿಂದ ಕೇರಳದ ಪತ್ರಕರ್ತರ ವಿಚಾರಣೆ

newsics.com ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಮಹಿಳಾ ಪತ್ರಕರ್ತರೊಬ್ಬರು ಕೂಡ ಸೇರಿದ್ದಾರೆ ಎಂದು...
- Advertisement -
error: Content is protected !!