Thursday, December 2, 2021

ವಿಶ್ವಾದ್ಯಂತ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿ, 64 ಸಾವಿರ ಮಂದಿಗೆ ಸೋಂಕು

Follow Us

ನವದೆಹಲಿ: ಜಗತ್ತಿನಾದ್ಯಂತ ಕಳೆದ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 1,89 ಲಕ್ಷಕ್ಕೇರಿದೆ. ಗುರುವಾರ 64 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 27 ಲಕ್ಷಕ್ಕೇರಿದೆ. ಈ ಪೈಕಿ 58 ಸಾವಿರ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.
ಅಮೆರಿಕದಲ್ಲಿ ಒಂದೇ ದಿನ 1 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಒಟ್ಟು 49 ಸಾವಿರ ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 25 ಸಾವಿರ, ಸ್ಪೇನ್ ನಲ್ಲಿ 22 ಸಾವಿರ, ಫ್ರಾನ್ಸ್ ನಲ್ಲಿ 21,856 ಮಂದಿ ಹಾಗೂ ಇಂಗ್ಲೆಂಡ್ ನಲ್ಲಿ 18,738 ಮಂದಿ ಮೃತಪಟ್ಟಿದ್ದಾರೆ.
ಜಗತ್ತಿನಾದ್ಯಂತ 17,70,153 ಮಂದಿ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 7,40,379 ಮಂದಿ ಗುಣಮುಖರಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...

‘ಮಾನ್ಯವರ್‌’ ಬಟ್ಟೆ ಮಳಿಗೆಯಲ್ಲಿ ಅಗ್ನಿ ದುರಂತ

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರುವ 'ಮಾನ್ಯವರ್‌' ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ 'ಮಾನ್ಯವರ್‌' ಬಟ್ಟೆ ಮಳಿಗೆಯಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ...
- Advertisement -
error: Content is protected !!