Wednesday, March 3, 2021

ಸುರಂಗ ಕೊರೆವ ಯಂತ್ರ ಬಿದ್ದು 6 ಗಣಿ ಕಾರ್ಮಿಕರು ಸಾವು

newsics.com
ಗುವಾಹಟಿ(ಮೇಘಾಲಯ): ಇಲ್ಲಿನ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.
ಅಸ್ಸಾಂ ಮೂಲದ ಗಣಿ ಕಾರ್ಮಿಕರು ಯಂತ್ರದ ಸಹಾಯದಿಂದ ಸುರಂಗ ಕೊರೆಯುತ್ತಿದ್ದರು. ಆದರೆ ಅದು ಒಡೆದು 150 ಅಡಿ ಆಳಕ್ಕೆ ಬಿದ್ದು ದುರಂತ ಸಂಭವಿಸಿದೆ. ಶವಗಳನ್ನು ಹೊರತೆಗೆಯಲಾಗಿದ್ದು ಶವಪರೀಕ್ಷೆಗಾಗಿ ಜಿಲ್ಲೆಯ ಖ್ಲೀಹ್ರಿಯತ್‌ನ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಲಿಯಾದ ಆರು ಮಂದಿ ಪೈಕಿ ಐವರನ್ನು ಗುರುತಿಸಲಾಗಿದ್ದು, ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಇ. ಖರ್ಮಲ್ಕಿ ತಿಳಿಸಿದ್ದಾರೆ. 2014ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ನಿಷೇಧದ ಹೊರತಾಗಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ಮಲೆನಾಡನ್ನು ನಡುಗಿಸಿದ ಸ್ಫೋಟ: ಮೃತರ ಕುಟಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ

ಸಿಬ್ಬಂದಿ ಕಟ್ಟಿಹಾಕಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನ ದರೋಡೆ

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!