ಲಕ್ನೋ: ವಿಚಿತ್ರ ಪ್ರಕರಣವೊಂದು ಉತ್ತರಪ್ರದೇಶದ ಆಗ್ರಾದಿಂದ ವರದಿಯಾಗಿದೆ. ಏಳು ಮಕ್ಕಳ ತಾಯಿ ಹಾಗೂ 60 ವರ್ಷದ ಮಹಿಳೆಯೊಬ್ಬಳು 22ರ ಯುವಕನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಹಿಳೆಯ ಪತಿ ಹಾಗೂ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ಈ ಕೃತ್ಯದಿಂದ ಪರಿಸರದಲ್ಲಿ ಅಶಾಂತಿ ಸೃಷ್ಟಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಎಫ್ ಐ ಆರ್ ದಾಖಲಿಸಲಾಗಿದೆ.