ಮುಂಬೈ; ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪೆಟ್ರೋಲ್ ಮಾದರಿಯ ಸ್ಮಾರ್ಟ್ ಹೈಬ್ರಿಡ್ (ಎಸ್ಎಚ್ ವಿಎಸ್ ) 2019ರ ಜನವರಿ 1 ಮತ್ತು ನವೆಂಬರ್ 21 ರವರೆಗೆ ತಯಾರಿಸಿರುವ 63,493 ಸಿಯಾಜ್, ಎರ್ಟಿಗಾ ಮತ್ತು ಎಕ್ಸ್ ಎಲ್ 6 ವಾಹನಗಳನ್ನು ಹಿಂಪಡೆಯಲಿದೆ.
ತಮ್ಮ ವಾಹನಗಳ ಸುರಕ್ಷಾ ಉಪಕರಣಗಳಲ್ಲಿ ದೋಷವಿರಬಹುದು ಎಂಬ ಅನುಮಾನವಿದ್ದವರು ಕೂಡ ಮಾರುತಿಸುಜುಕಿ ವೆಬ್ ಸೈಟ್ ಗೆ ಹೋಗಿ ತಮ್ಮ ಚಾಸಿ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಯಾವುದಾದರೂ ರಿಪೇರಿಯ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.