ಕಾಸರಗೋ಼ಡು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಶಾಸಕ ಕಮರುದ್ದೀನ್ ವಿರುದ್ಧ ಮತ್ತೆ ಆರು ವಂಚನೆ ಪ್ರಕರಣ ದಾಖಲಿಸಲಾಗಿದೆ. ಚಂದೇರಾ ಪೊಲೀಸ್ ಠಾಣೆಯಲ್ಲಿ ಐದು ಮತ್ತು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಒಂದು ವಂಚನೆ ಪ್ರಕರಣ ದಾಖಲಿಸಲಾಗಿದೆ.
ಇದರೊಂದಿಗೆ ಶಾಸಕರ ವಿರುದ್ಧದ ವಂಚನೆ ಮೊಕದ್ದಮೆ 63ಕ್ಕೆ ಏರಿದೆ. ಶಾಸಕ ಕಮರುದ್ದೀನ್ ಪಾಲುದಾರರಾಗಿರುವ ಚಿನ್ನದ ಅಂಗಡಿ ಜನರಿಂದ ಠೇವಣಿ ಸ್ವೀಕರಿಸಿ ಬಳಿಕ ಚಿನ್ನ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಒಂದು ತಿಂಗಳಿನಲ್ಲಿ ಒಟ್ಟು 63 ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಅಪರಾಧ ಪತ್ತೆ ದಳ ಈ ಕುರಿತು ತನಿಖೆ ನಡೆಸುತ್ತಿದೆ.