newsics.com
ಲುಧಿಯಾನ: ಸ್ನೇಹಿತೆಯ ಮನೆಯಲ್ಲಿ ಕಾಲ ಕಳೆಯುವ ಸಂಬಂಧ ಆರನೆ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅಪಹರಣ ನಾಟಕ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಪಂಜಾಬಿನ ಲುಧಿಯಾನದಲ್ಲಿ ಈ ಪ್ರಕರಣ ವರದಿಯಾಗಿದೆ. ಗೆಳತಿ ಮೇಲೆ ಒತ್ತಡ ಹೇರಿದ್ದ ವಿದ್ಯಾರ್ಥಿನಿ , ನನ್ನನ್ನು ಐವರು ಅಪಹರಣಕಾರರು ಅಪಹಿಸಿದ್ದಾರೆ ಎಂಬ ಮಾಹಿತಿ ತಂದೆಗೆ ತಲುಪಿಸಲು ಹೇಳಿದ್ದಳು. ಆದರೆ ಆಕೆಯ ಸ್ನೇಹಿತೆ ಪೊಲೀಸರ ಬಳಿ ನಿಜ ಹೇಳಿದ್ದಳು.
ಇದೀಗ ಸ್ನೇಹಿತೆಯ ಮನೆಯಲ್ಲಿ ಇದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ.