Saturday, June 10, 2023

SMS ಕಳುಹಿಸಿ ಮಹಿಳೆಯಿಂದ 7 ಲಕ್ಷ ರೂ. ದೋಚಿದ ಖದೀಮ!

Follow Us

newsics.com

ಮುಂಬೈ: ಅಂಧೇರಿ ಪ್ರದೇಶದ 65 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚನೆ ಘಟನೆಗೆ ಬಲಿಯಾಗಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಸುಮಾರು 7 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ವಂಚಕನು ವಿದ್ಯುತ್ ಕಂಪನಿಯ ಅಧಿಕಾರಿಯಂತೆ ನಟಿಸಿ, SMS ಕಳುಹಿಸಿ ಮನೆಯ ಕರೆಂಟ್ ಬಿಲ್ ಮಿತಿಮೀರಿ ಬಂದಿದೆ ಎಂದು ಎಚ್ಚರಿಕೆ ನೀಡುವ ನಾಟಕ ಮಾಡಿದ್ದಾನೆ, ಎಂದು ಮಹಿಳೆ ಸೈಬರ್ ಕ್ರೈಮ್‌ಗಾಗಿ ಅಂಧೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ಎಸ್‌ಎಂಎಸ್‌ ಕಳುಹಿಸಲಾಗಿದ್ದು, ಅದರಲ್ಲಿ ಮನೆಯ ಕರೆಂಟ್ ಬಿಲ್ ಮಿತಿಮೀರಿ ಬಂದಿದೆ , ಈ ಅಪ್ಲಿಕೇಶನ್ ಅನ್ನು ಲಾಗಿನ್ ಮಾಡಿ ಎಂಬ ಮೆಸೇಜ್ ಕಳುಹಿಸಿದ್ದಾನೆ.

ಇದಕ್ಕೆ ಸ್ಪಂದಿಸಿದ ಮಹಿಳೆಗೆ, ಸ್ಕ್ಯಾಮರ್ ನಂತರ ಫೋನ್‌ನಲ್ಲಿ ಟೀಮ್ ವಿವರ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಲು ತಿಳಿಸಿದ್ದಾನೆ ಮತ್ತು ತನ್ನ ಮೊಬೈಲ್ ನಿಂದ ಅಪ್ಲಿಕೇಶನ್ ಅನ್ನು ಲಾಗಿನ್ ಆಗಿ, ಆ ಮಹಿಳೆಗೆ ಸೂಚನೆಗಳನ್ನು ಕೊಡುತ್ತಾ ಬರುತ್ತಾನೆ, ನಂತರ ಸಂತ್ರಸ್ತೆ ಲಕ್ಷಗಟ್ಟಲೆ ಭಾರತೀಯ ವಹಿವಾಟಿನ ಸೂಚನೆಗಳನ್ನು ಸ್ವೀಕರಿಸಿದರು. ಅದರಲ್ಲಿ ಬ್ಯಾಂಕ್ ಡೀಟೇಲ್ಸ್ ಮೂಲಕ 7 ಲಕ್ಷ ದೋಚಿದ್ದಾನೆ.

ಈ ಅನುಮಾನಾಸ್ಪದ ವಹಿವಾಟುಗಳನ್ನು ಎಸ್‌ಬಿಐ ವಂಚನೆ ನಿರ್ವಹಣಾ ತಂಡವು ಪರಿಶೀಲನೆ ನಡೆಸಿ, ನಂತರ ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!