ಕಾಸರಗೋಡು: ತಿರುವನಂತಪುರದಿಂದ ಗೋಕರ್ಣದವರೆಗಿನ ಭೂಮಿಯನ್ನು ಪರಶುರಾಮ ಸೃಷ್ಟಿ ಎಂದು ಕರೆಯುತ್ತಾರೆ. ಹಾಗಾಗಿ ಈ ಪ್ರದೇಶದ ಆಚಾರ ವಿಚಾರಗಳು ಮತ್ತು ನಂಬಿಕೆಗಳು ಭಾರತದ ಇತರ ಭೂ ಪ್ರದೇಶಗಿಂತ ಭಿನ್ನವಾಗಿವೆ. ಕರ್ನಾಟಕದ ಕರಾವಳಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಾಸರಗೋಡಿನಲ್ಲಿ ಭೂತಾರಾಧನೆ ಈಗಲೂ ಶ್ರದ್ದಾ ಭಕ್ತಿಯಿಂದ ಮುಂದುವರಿದಿದೆ.
ಇದೀಗ ಕಾಸರಗೋಡಿನಿಂದ ಸುಮಾರು 15 ಕಿಲೋ ಮೀಟರ್ ದಕ್ಷಿಣದಲ್ಲಿರುವ ಕಲ್ಯೋಟ್ ಎಂಬಲ್ಲಿ 717 ವರ್ಷಗಳ ಬಳಿಕ ದೈವಗಳ ಮಹಾ ಭೂತ ಕೋಲ ಅಂದರೆ ಪೆರುಂಕಳಿಯಾಟ ನಡೆಯಲಿದೆ. ಈ ಸಂಬಂಧ ಉಗ್ರಾಣ ಮುಹೂರ್ತವನ್ನು ಶುಕ್ರವಾರ ನೆರವೇರಿಸಲಾಯಿತು. ಡಿಸೆಂಬರ್ 23 ರಿಂದ 29 ವರೆಗೆ ಪೆರುಂಕಳಿಯಾಟ ನಡೆಯಲಿದೆ. 50ಕ್ಕೂ ಹೆಚ್ಚು ಭೂತಗಳ ನರ್ತನ ಇದರ ವೈಶಿಷ್ಟ್ಯ. ಉತ್ತರ ಮಲಬಾರಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ