Saturday, June 10, 2023

73% ಮಹಿಳೆಯರು ಋತುಚಕ್ರದ ರಜೆ ಬಯಸುತ್ತಾರೆ

Follow Us

newsics.com

ನವದೆಹಲಿ: ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು 73 ಪ್ರತಿಶತದಷ್ಟು ಮಹಿಳೆಯರು ಋತುಚಕ್ರದ ರಜೆಯನ್ನು ತೆಗೆದುಕೊಳ್ಳಲು ಕಂಪನಿಗಳು ಅವಕಾಶ ನೀಡಬೇಕೆಂದು ಬಯಸುತ್ತಾರೆ. 86.6 ಪ್ರತಿಶತ ಮಹಿಳೆಯರು ನೈರ್ಮಲ್ಯ ವಿಧಾನಗಳು ಮತ್ತು ಋತುಚಕ್ರ ಸ್ನೇಹಿ ಮೂಲಸೌಕರ್ಯಗಳು ಲಭ್ಯವಿರುವ ಕೆಲಸದ ಸ್ಥಳದ ಪರವಾಗಿದ್ದಾರೆ ಎಂಬುದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ.

ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ಲಕ್ನೋ ಮತ್ತು ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ ಸುಮಾರು 10,000 ಮಹಿಳೆಯರು ಭಾಗವಹಿಸಿದ್ದಾರೆ.

ಮಹಿಳೆಯರಿಗೆ ಸಂಬಂಧಿಸಿದಂತೆ ನೈರ್ಮಲ್ಯ ಬ್ರಾಂಡ್ ಎವರ್ಟೀನ್ ನಡೆಸಿದ ಋತುಚಕ್ರ ನೈರ್ಮಲ್ಯ ಸಮೀಕ್ಷೆ 2023 ರ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ 71.7 ಪ್ರತಿಶತದಷ್ಟು ಜನರು ಋತುಚಕ್ರದ ರಜೆಯನ್ನು ವೇತನ ಸಹಿತ ರಜೆಯನ್ನಾಗಿಸಲು ಬಯಸುವುದಿಲ್ಲ, ಒಂದು ವೇಳೆ ಋತುಚಕ್ರದ ರಜೆ ವೇತನ ಸಹಿತವಾಗಿದ್ದರೆ, ಅದು ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂಜರಿಯುವಂತೆ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

6 ರಾಜ್ಯದ ಭಾರತೀಯ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ!; ಈ ನಿರ್ಧಾರಕ್ಕೆ ಕಾರಣವೇನು?

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!