Friday, January 15, 2021

75 ಬಿಜೆಪಿ ನಾಯಕರಿಗೆ ಕೊರೋನಾ ಪಾಸಿಟಿವ್…!

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಮರಾಭ್ಯಾಸದಲ್ಲಿ ತೊಡಗಿ ಮೀಟಿಂಗ್ ಮೇಲೆ‌ ಮೀಟಿಂಗ್ ಮಾಡುತ್ತಿರುವ ಬಿಹಾರ ಬಿಜೆಪಿ ನಾಯಕರಿಗೆ ಕೊರೋನಾ ಶಾಕ್ ನೀಡಿದ್ದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಎಮ್ ಎಲ್ ಸಿ ಸೇರಿದಂತೆ 75 ನಾಯಕರಿಗೆ ಕೊರೋನಾ ವಕ್ಕರಿಸಿದೆ.
ಮೂಲಗಳ ಮಾಹಿತಿ ಪ್ರಕಾರ, ಪಾಟ್ನಾ ಬಿಜೆಪಿ ರಾಜ್ಯ ಕಾರ್ಯಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 100 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಸ್ಟೇಟ್ ಜನರಲ್ ಸೆಕ್ರೆಟರಿ ದೇವೇಶ್ ಕುಮಾರ್ ಹಾಗೂ ಪರಿಷತ್ ಸದಸ್ಯೆ ರಾಧಾ ಮೋಹನ್ ಶರ್ಮಾ ಸೇರಿ ಒಟ್ಟು 75 ನಾಯಕರಿಗೆ ಸೋಂಕು ತಗುಲಿದೆ‌.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್ ಹಾಗೂ ನವೆಂಬರ್’ನಲ್ಲಿ ನಡೆಯಲಿದ್ದು ಅದಕ್ಕಾಗಿ ನಾಯಕರು ಪ್ರಚಾರ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿದ್ದೇ ರೋಗ ಹರಡೋದಿಕ್ಕೆ ಕಾರಣವಾಗಿದೆಯಂತೆ.

ಮತ್ತಷ್ಟು ಸುದ್ದಿಗಳು

Latest News

ಧಾರವಾಡ ಅಪಘಾತ: ಮೃತ ಯುವತಿಯರ ಶವ ಅದಲು-ಬದಲು

newsics.com ಧಾರವಾಡ: ಇಂದು(ಜ.15) ಧಾರವಾಡದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಜಿಲ್ಲಾಸ್ಪತ್ರೆಯಲ್ಲಿ ಅದಲುಬದಲು ಶವ ನೀಡಿದ ಘಟನೆ ನಡೆದಿದೆ. ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ...

ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್

newsics.com ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. 'ಲತಾ ಮಂಗೇಶ್ಕರ್'ಗೆ ಒಳ್ಳೆಯ‌ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ. ಸಂಗೀತ ಲೋಕದ ದಿಗ್ಗಜರು ಆಕೆಯನ್ನು ಪ್ರಶಂಸಿವುದು...

ರಾಜ್ಯದಲ್ಲಿ 243ಕಡೆ ಲಸಿಕೆ ವಿತರಣೆ: 237ಸ್ಥಳದಲ್ಲಿ ಕೋವಿಶೀಲ್ಡ್, 6 ಕಡೆ ಕೋವಾಕ್ಸಿನ್

newsics.com ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಲಸಿಕೆ ಹಂಚಿಕೆ ಪ್ರಾರಂಭವಾಗುತ್ತಿದ್ದು 243 ಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ 10ಕಡೆ ಲಸಿಕೆ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ...
- Advertisement -
error: Content is protected !!