Monday, October 2, 2023

ಸಮುದ್ರಕ್ಕೆ ಹಾರಿ‌ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ, ಓರ್ವ ಯುವಕ ಸಾವು

Follow Us

newsics.com
ಅಹಮದಾಬಾದ್: ಮುಳುಗುತ್ತಿದ್ದ‌ ಮೂವರು ಯುವಕರನ್ನು ಬಿಜೆಪಿ ಶಾಸಕರೊಬ್ಬರು ಸಮುದ್ರಕ್ಕೆ ಹಾರಿ ರಕ್ಷಿಸಿದ್ದು, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ರಾಜುಲಾ ಶಾಸಕ ಹೀರಾ ಸೋಲಂಕಿ ಯುವಕರನ್ನು ರಕ್ಷಿಸಿದ್ದಾರೆ. ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು ಓರ್ವ ಸಾವನ್ನಪ್ಪಿದ್ದಾರೆ.

ನಾಲ್ವರು ಯುವಕರು ಸಮುದ್ರ ಕೊಲ್ಲಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ಸಮಯದಲ್ಲಿ, ಅವರು ಆಳವಾದ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಕಡಲ ತೀರದಲ್ಲಿರುವ ರಾಜುಲಾ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರಿಗೆ ಮಾಹಿತಿ ನೀಡಿದ್ದಾರೆ.

ಶಾಸಕ ಬೋಟ್ ಸಹಾಯದಿಂದ ಸ್ಥಳಕ್ಕಾಗಮಿಸಿ ನೀರಿನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದು, ಮೂವರನ್ನು ದಡ ಸೇರಿಸಿದ್ದಾರೆ. ಒಬ್ಬ ಯುವಕನಿಗಾಗಿ ಸುಮಾರು 2 ಗಂಟೆ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಆದರೂ ಶವವಾಗಿ ಪತ್ತೆಯಾಗಿದ್ದಾನೆ. ನಾಲ್ವರು ಸ್ನೇಹಿತರಾದ ಕಲ್ಪೇಶ್ ಶಿಯಾಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಅವರು ಬುಧವಾರ ಮಧ್ಯಾಹ್ನ ಪಟ್ವಾ ಗ್ರಾಮದ ಬಳಿ ಸ್ನಾನ ಮಾಡಲು ತೆರಳಿದ್ದರು.

LPG ಸಿಲಿಂಡರ್ ದರದಲ್ಲಿ 83.50 ರೂ. ಇಳಿಕೆ

ಸಿಎಂ ಸಿದ್ದರಾಮಯ್ಯಗೆ ಮುಖ್ಯ ಸಲಹೆಗಾರನಾಗಿ ಸುನೀಲ್‌ ಕನುಗೋಳು ನೇಮಕ

ಮತ್ತಷ್ಟು ಸುದ್ದಿಗಳು

vertical

Latest News

ಮೊಸಳೆಯೊಂದಿಗೆ ಬೇಸ್ ಬಾಲ್ ಮ್ಯಾಚ್ ನೋಡಲು ಬಂದ ಪ್ರಾಣಿ ಪ್ರೇಮಿ!

newsics.com ಅಮೆರಿಕ: ಮನೆಯಲ್ಲಿ ಸಾಕಿದ್ದ ಮೊಸಳೆಯೊಂದಿಗೆ ಬೇಸ್‌ಬಾಲ್ ಮ್ಯಾಚ್‌ ನೋಡಲು ಸ್ಟೇಡಿಯಂ ಬಂದ ಪ್ರಾಣಿ ಪ್ರೇಮಿಯೊಬ್ಬನನ್ನು ಕಂಡು ಭದ್ರತಾ ಸಿಬ್ಬಂದಿ ದಂಗಾಗಿ ಪ್ರವೇಶ ನಿರಾಕರಿಸಿರುವ ಪ್ರಸಂಗ ಅಮೆರಿಕಾದ...

ಜಿಪಿಎಸ್ ಮ್ಯಾಪ್ ಎಡವಟ್ಟು: ಕಾರು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರ ಸಾವು

newsics.com ತಿರುವನಂತಪುರಂ: ಜಿಪಿಎಸ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ತಡರಾತ್ರಿ ಭಾರಿ ಮಳೆಯ ಕಾರಣ ಅವಘಡ ಸಂಭವಿಸಿದೆ. ಮೃತರನ್ನು ಡಾ.ಅದ್ವೈತ್ (29)...

ವರದಿಗಾರ್ತಿ ಮೇಲೆ ರೇಗಿದ ಅಣ್ಣಾಮಲೈ: ಖಂಡನೆ

newsics.com ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಹಿಳಾ ವರದಿಗಾರರೊಬ್ಬರ ಮೇಲೆ ಸಿಟ್ಟಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ವರದಿಗಾರ್ತಿ ಜೊತೆ ಅಣ್ಣಾಮಲೈ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ...
- Advertisement -
error: Content is protected !!