Monday, September 27, 2021

ನೆಲಕ್ಕೆ ಬಡಿದು ಮೂರು ವರ್ಷದ ಮಗಳನ್ನೇ ಕೊಂದ ತಂದೆ!

Follow Us

newsics.com
ನೋಯ್ಡಾ: ತಂದೆ ತಾಯಿ ಜಗಳದಲ್ಲಿ ಮೂರು ವರ್ಷದ ಬಾಲಕಿ ಹತ್ಯೆಯಾಗಿದ್ದಾಳೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಸೆಕ್ಟರ್ 49ನ ಪೊಲೀಸ್ ಠಾಣೆ ವ್ಯಾಪ್ತಿಯ ಬರೋಲಾ ಗ್ರಾಮದ ಮನೆಯಲ್ಲಿ ಭಾನುವಾರ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ. ಜಗಳದ ವೇಳೆ ಸಿಟ್ಟಿನಿಂದ ತಂದೆ ಬಾಲಕಿಯನ್ನು ಎತ್ತಿ ನೆಲಕ್ಕೆ ಬಿಸಾಡಿದ್ದಾನೆ. ಈ ವೇಳೆ ಆಕೆಯ ತಾಯಿಗೂ ಗಂಭೀರವಾಗಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಅಮಿತ್ ತಲೆಮರೆಸಿಕೊಂಡಿದ್ದಾನೆ. ಈತ ಬುಲಂದ್‌ಶಹರ್ ಜಿಲ್ಲೆಯ ಮೂಲದವನು. ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಈತ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಣ್‌ವಿಜಯ್ ಸಿಂಗ್ ತಿಳಿಸಿದ್ದಾರೆ.
ನೆರೆಹೊರೆಯವರು ಮತ್ತು ಸ್ಥಳೀಯರನ್ನು ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ಮದ್ಯವ್ಯಸನಿಯಾಗಿದ್ದ. ಆಗಾಗ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮಿತ್ ಬಂಧನಕ್ಕೆ ಬಲೇ ಬೀಸಿದ್ದಾರೆ.

ಮೂವರು ಅರ್ಚಕರ ಕೊಲೆ ಪ್ರಕರಣ; ಗುಂಡು ಹಾರಿಸಿ 3 ಆರೋಪಿಗಳ ಬಂಧನ

ಮೂರು ಲಕ್ಷ ಗಾಂಜಾ ಗಿಡಗಳ ನಾಶ

ಮತ್ತಷ್ಟು ಸುದ್ದಿಗಳು

Latest News

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ: ಇಬ್ಬರು ಟೆಕ್ಕಿಗಳ ಸಾವು

newsics.com ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಟೆಕ್ಕಿಗಳು ಅಸುನೀಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಫೇಸ್ 2 ಬೆಸೆಯುವ ಲಿಂಕ್...

ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

newsics.com ನವದೆಹಲಿ: ಪ್ರಧಾನಿ ನರೇಂದ್ರ‌ ಮೋದಿ ಭಾನುವಾರ ರಾತ್ರಿ ಹೊಸ ಸಂಸತ್‌ ಕಟ್ಟಡದ‌ ನಿರ್ಮಾಣ ಸ್ಥಳಕ್ಕೆ ದಿಢೀರ್ ಭೇಟಿ‌ ನೀಡಿದರು. ಅಮೆರಿಕದಿಂದ ಹಿಂದಿರುಗಿ 24 ಗಂಟೆಗಿಂತಲೂ ಮುಂಚೆ ಪ್ರಧಾನಿ ಮೋದಿ ಭಾನುವಾರ ರಾತ್ರಿ 8: 45...

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್’ಗೆ 54 ರನ್’ಗಳ ಭರ್ಜರಿ ಜಯ

newsics.com ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್...
- Advertisement -
error: Content is protected !!