newsics.com
ಕಾನ್ಪುರ: ಗೆಳೆಯನ ಮನೆಯಲ್ಲಿದ್ದ 18 ವರ್ಷದ ಮಗಳನ್ನು ಆಕೆಯ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಗಜ್ನೇರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ ಪನ್ನಾ ಗ್ರಾಮದಲ್ಲಿ ಘಟನೆ ನಡೆದಿದೆ. ಹುಡುಗಿ ಗೆಳೆಯನ ಮನೆಗೆ ಹೋಗಿರುವ ವಿಷಯ ತಂದೆಗೆ ಗೊತ್ತಾಗಿದೆ. ತನ್ನ ಸ್ನೇಹಿತನಿಂದ ಮಗಳು ಆಕೆಯ ಗೆಳೆಯನ ಮನೆಯಲ್ಲಿರುವ ವಿಚಾರ ತಿಳಿದ ತಂದೆ ಸಂಬಂಧಿಕರೊಂದಿಗೆ ಅಲ್ಲಿಗೆ ತೆರಳಿದ್ದಾನೆ. ಮನೆಗೆ ಬರುವಂತೆ ಮಗಳಿಗೆ ತಾಕೀತು ಮಾಡಿದ್ದಾನೆ. ಮಗಳು ಮನೆಗೆ ವಾಪಸಾಗಲು ವಾದ ಮಾಡಿದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಎಲ್ಲರೆದುರಲ್ಲೇ ಮಗಳ ಮೇಲೆ ದಾಳಿ ಮಾಡಿದ ಆರೋಪಿ ಆಕೆ ಮೃತಪಟ್ಟರೂ ಕೊಡಲಿಯಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಣ್ಣೆದುರಲ್ಲೇ ನಡೆದ ಭೀಕರ ಹತ್ಯೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಹುಡುಗಿಯನ್ನು ಪಾರು ಮಾಡಲು ಬಂದ ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ಕಾನ್ಪುರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಒಂದೇ ದಿನ 97, 894 ಮಂದಿಗೆ ಕೊರೋನಾ ಸೋಂಕು,1132 ಬಲಿ
ಶ್ರೀನಗರದಲ್ಲಿ ಎನ್ ಕೌಂಟರ್: ಮೂವರು ಭಯೋತ್ಪಾದಕರ ಹತ್ಯೆ
ಪ್ರಧಾನಿ ಮೋದಿಗೆ ಹುಟ್ಟು ಹಬ್ಬದ ಸಂಭ್ರಮ: ಶುಭ ಕೋರಿದ ನೇಪಾಳ ಪ್ರಧಾನಿ
ಎನ್ ಐ ಎ ಯಿಂದ ಕೇರಳ ಸಚಿವ ಕೆ . ಟಿ. ಜಲೀಲ್ ವಿಚಾರಣೆ