ಮುಂಬೈ: ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಿವಿಧೆಡೆ 15 ಎನ್ಡಿಆರ್ಎಫ್(ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್ ನಿಯೋಜನೆ ಮಾಡಲಾಗಿದೆ. ಮುಂಬೈ, ರಾಯಗಡ್, ಪಾಲ್ವರ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಎನ್ಡಿಆರ್ಫ್ ತಂಡವು ಸಿದ್ಧವಾಗಿದೆ.
ಮನ್ನೆಚ್ಚರಿಕೆಯ ಕ್ರಮವಾಗಿ ಎನ್ಡಿಆರ್ಎಫ್ ತಂಡವು ಕಡಲತೀರದ ಪ್ರದೇಶದ ತಪಾಸಣೆ ನಡೆಸಿತು. ಎನ್ಡಿಆರ್ಎಫ್ ಕಮಾಂಡರ್ ಈಶ್ವರ್ ಮೇಟ್, ಹೈ ಅಲರ್ಟ್ ಇರುವ ಸ್ಥಳಗಳಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಪುನರ್ವಸತಿ ಸಚಿವ ವಿಜಯ್ ವಟ್ಟಿವಾರ್, ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಹೆಚ್ಚಿರುತ್ತದೆ. ಕೊಂಕಣದ ಮುಂಬೈಯಲ್ಲಿರುವ ಸಮುದ್ರ ತೀರವನ್ನು ಖಾಲಿ ಮಾಡಲು ಮೀನುಗಾರರಿಗೆ ಸೂಚಿಸಲಾಗಿದೆ. ಸಿಂಧುದುರ್ಗ್ ನಂತಹ ಹತ್ತಿರದ ಸಮುದ್ರಗಳಲ್ಲಿ 6 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದರು.