newsics.com
ಐಜ್ವಾಲ್(ಮಿಜೋರಾಂ): ಪತ್ನಿಯನ್ನು ಕೊಲ್ಲಲು ಮುಂದಾದ ಪತಿಯೊಬ್ಬ ತಾನೂ ಸಾವಿಗೀಡಾದ ಘಟನೆ ಮಿಜೋರಾಂನ ಲುಂಗೇಲಿಯಲ್ಲಿ ನಡೆದಿದೆ.
ಪತ್ನಿ ಮೇಲೆ ಕೊಪಗೊಂಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತಿ ಆಕೆಯನ್ನು ಕೊಲ್ಲಲು ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಬಾಂಬ್ ಸ್ಫೋಟವಾಗಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ.
61 ವರ್ಷದ ಮಹಿಳೆ ಮತ್ತು ಈಕೆಯ ಪತಿ ರೋಹ್ಮಿಂಗ್ಲಿಯಾನ ಮೃತಪಟ್ವರು. ಬುಧವಾರ ಮಧ್ಯಾಹ್ನ 12:15ರ ವೇಳೆಗೆ ಬಾಂಬ್ ಸ್ಫೋಟವಾಗಿದೆ. ಮಹಿಳೆ ರೋಹ್ಮಿಂಗ್ಲಿಯಾನನ್ನು ಎರಡನೇ ಮದುವೆಯಾಗಿದ್ದಳು. ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಕಳೆದ ಒಂದು ವರ್ಷದಿಂದಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಅವರು ನಿನ್ನೆ ಒಂದೇ ಕಡೆ ಸೇರಿದ್ದರು. ತರಕಾರಿ ಮಾರುತ್ತಿದ್ದ ಆ ಮಹಿಳೆಯನ್ನು ಹುಡುಕಿ ಬಂದ ಆಕೆಯ ಪತಿ, ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ಮಗಳು ದೂರ ಹೋದ ನಂತರ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ
ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತರಕಾರಿ ಮಾರುತ್ತಿದ್ದ ಆ ಮಹಿಳೆಯನ್ನು ಹುಡುಕಿ ಬಂದ ಆಕೆಯ ಪತಿ, ಆಕೆಯ ಜತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ಮಗಳು ದೂರ ಹೋದ ನಂತರ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ.
ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದುಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿದ್ದ. ಆಗ ಎದ್ದು ನಿಂತ ತನ್ನ ಹೆಂಡತಿಯನ್ನು ಜೋರಾಗಿ ತಬ್ಬಿಕೊಂಡ ಕೂಡಲೇ ಬಾಂಬ್ ಸ್ಫೋಟವಾಗಿತ್ತು. ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲಿಶರು ತಿಳಿಸಿದ್ದಾರೆ.
ಜಿಯೋ ನೆಟ್ವರ್ಕ್ನಲ್ಲೂ ಸಮಸ್ಯೆ: 4 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ದೂರು