ಅಹಮಹಾಬಾದ್: ಹೆಣ್ಣು ಸಿಂಹವೊಂದು ಐದು ವರ್ಷದ ಬಾಲಕನನ್ನು ಹೊತ್ತೊಯ್ದು ತಿಂದಿರುವ ಘಟನೆ ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೇಲಿ ಜಿಲ್ಲೆಯ ರಾಜೌಲಾ ತಾಲೂಕಿನ ಉಚೈಯಾ ಗ್ರಾಮದ ರೈತನ ಐದು ವರ್ಷದ ಮಗ ಕಿಶೋರ್ ಪರ್ಮಾರ್ ಮೇಲೆ ಸಿಂಹ ಮಂಗಳವಾರ ತಡ ರಾತ್ರಿ ದಾಳಿ ನಡೆಸಿತ್ತು. ಹೆಣ್ಣು ಸಿಂಹ ತನ್ನ ಮರಿಗಳೊಂದಿಗೆ ಇದ್ದ ವೇಳೆ ಈ ದಾಳಿ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಸುಕಿನ 1ಗಂಟೆ ಸಮಯದಲ್ಲಿ ಮಗ ಕಿಶೋರ್ ಹಾಸಿಗೆಯಲ್ಲಿ ಇಲ್ಲದಿರುವುದನ್ನು ಪೋಷಕರು ಗಮನಿಸಿ ಹುಡುಕಲು ಆರಂಭಿಸಿದ್ದು, ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿರುವಾಗ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರ್ಧ ಭಾಗ ತಿಂದ ಕಿಶೋರ್ ಶವ ಪತ್ತೆಯಾಗಿದೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ದಾದ್ಬಾಯಿ ತಿಳಿಸಿದ್ದಾರೆ.
ಬಾಲಕನನ್ನು ಹೊತ್ತೊಯ್ದು ಕೊಂದ ಸಿಂಹ
Follow Us