Monday, November 29, 2021

ದೇಶಾದ್ಯಂತ ಚಪ್ಪಾಳೆ ತಟ್ಟಿ ಕೃತಜ್ಞತೆ ಸಮರ್ಪಣೆ

Follow Us

ನವದೆಹಲಿ: ವೈದ್ಯರ, ಆರಕ್ಷಕರ ಸೇವೆಯನ್ನು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸುವುದರ ಜತೆಗೆ ಪ್ರೋತ್ಸಾಹದ ಮಹಾಮಳೆಯನ್ನೇ ಸುರಿಸಲಾಯಿತು.
ಭಾನುವಾರ ಸಂಜೆ ಐದು ಗಂಟೆಗೆ ಸರಿಯಾಗಿ ದೇಶಾದ್ಯಂತ ಜನರು ಮಹಡಿ ಹಾಗೂ ರಸ್ತೆಯಲ್ಲಿ ನಿಂತು ನಮ್ಮನ್ನು ಸಲಹುತ್ತಿರುವ ವೈದ್ಯರು ಹಾಗೂ ನಮ್ಮನ್ನು ಸುರಕ್ಷಿತವಾಗಿ ಕಾಪಾಡುತ್ತಿರುವ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಭಿಮಾನದ ಹೊಳೆಯನ್ನೇ ಹರಿಸಿ ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಶಂಖ ಊದಿ, ತಟ್ಟೆ ಚಮಚಗಳಿಂದ ಸದ್ದು ಮಾಡುತ್ತಾ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು.
ದೇಶದ ಜನ ಪ್ರಧಾನಿ ಮೋದಿಯವರ ಕರೋನಾ ವೈರಸ್ ವಿರುದ್ಧ ಮೌನ ಸಮರವನ್ನೇ ಸಾರಿದ್ದಾರೆ. ಜನತಾ ಕರ್ಫ್ಯೂ ನಡುವೆಯೇ ಭಾನುವಾರ ಹಲವೆಡೆ ಮನೆಯಲ್ಲಿ ಇದ್ದ ಜನರು ಮಧ್ಯಾಹ್ನ ಐದು ಗಂಟೆಯಾಗುತ್ತಿದ್ದಂತೆ ಹೊರಗೆ ಬಂದು ಎಲ್ಲರೂ ತಮ್ಮ ಅಭಿಮಾನ ತೋರಿದ್ದಾರೆ. ಕೆಲ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಗುಲಾಬಿ ಹೂಗಳನ್ನು ನೀಡಿದ್ದಾರೆ. ತಮ್ಮೊಂದಿಗೆ ನಾವಿದ್ದೇವೆ ಎಂದು ಬೀಗಿ ಹೇಳಿದ್ದಾರೆ.
ಮಹಾಮಾರಿ ವೈರಸ್ ನಿಯಂತ್ರಿಸಲು ಮೋದಿ ಕರೆಕೊಟ್ಟಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!