newsics.com
ನವದೆಹಲಿ: ವಯಸ್ಸಾಗುವುದನ್ನು ವಿಳಂಬಗೊಳಿಸುವ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ‘ಲೆಮನ್ ಪೆಪ್ಪರ್ ಫಿಶ್’ ಪಾಕ ವಿಧಾನವನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಖಾತೆ ಸಚಿವ ಗಿರಿರಾಜ್ ಸಿಂಗ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಲೆಮನ್ ಪೆಪ್ಪರ್ ಫಿಶ್’ (ಲಿಂಬೆ, ಕರಿಮೆಣಸು ಮಿಶ್ರಿತ ಮೀನಿನ ಖಾದ್ಯ)ನ ಪಾಕ ವಿಧಾನ ಉತ್ತಮ ಪರಿಣಾಮ ಬೀರುತ್ತದೆ. ಈ ಖಾದ್ಯ ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
‘ಲೆಮನ್ ಪೆಪ್ಪರ್ ಫಿಶ್’- ಶುಕ್ರವಾರ ರಾತ್ರಿಯ ಪರಿಪೂರ್ಣ ಭೋಜನ! ಇದು ವೃದ್ಧಾಪ್ಯವನ್ನು ವಿಳಂಬಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೆದುಳು ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದ ಸ್ಮರಣೆಯನ್ನು ಸುಧಾರಿಸಲು ನೆರವು ನೀಡುತ್ತದೆ’ ಎಂದು ಗಿರಿರಾಜ್ ಸಿಂಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಟ್ವೀಟ್‌ನೊಂದಿಗೆ ”ಲೆಮನ್ ಪೆಪ್ಪರ್ ಫಿಶ್” ಪಾಕ ವಿಧಾನದ ವೀಡಿಯೊವನ್ನೂ ಅವರು ಲಗತ್ತಿಸಿದ್ದಾರೆ.
ರಾಜ್ಯದಲ್ಲಿ ಸೆ.28ರಿಂದ 3 ಹಂತಗಳಲ್ಲಿ ಕೋರ್ಟ್ ಕಾರ್ಯಾರಂಭ
ಏರ್ ಇಂಡಿಯಾ ಎಕ್ಸ್’ಪ್ರೆಸ್ ಮೇಲಿನ ನಿರ್ಬಂಧ ಹಿಂಪಡೆದ ದುಬೈ
ಪ್ರಯಾಣ ದರ ನಿಗದಿಗೆ ಖಾಸಗಿ ರೈಲು ಸಂಸ್ಥೆಗಳಿಗೆ ಕೇಂದ್ರ ಸ್ವಾತಂತ್ರ್ಯ