newsics.com
ಬಿಹಾರ: ಕತಿಹಾರ್ ಜಿಲ್ಲೆಯಲ್ಲಿ ವಿಚಿತ್ರ ಮಗುವಿನ ಜನನವಾಗಿದೆ. ಇಲ್ಲಿನ ಕತಿಹಾರ್ನ ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳು ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ.
ಕತಿಹಾರ್ನ ಮುಫಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹಫ್ಲಗಂಜ್ ಗ್ರಾಮದ ನಿವಾಸಿ ರಾಜು ಸಾಹ್ ಅವರ ಪತ್ನಿ ನಿನ್ನೆ ಈ ಶಿಶುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ‘ಮಗು ದೈಹಿಕವಾಗಿ ವಿಕಲಾಂಗವಾಗಿದೆ. ಮಹಿಳೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದು, ಅವುಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣ ಈ ರೀತಿಯಾಗಿ ಜನಿಸಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’ ಎಂದರು.