ಜಮ್ಮು ಕಾಶ್ಮೀರ: ಟ್ರಕ್ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.
ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಹೋಗುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಟ್ರಕ್ ಒಂದನ್ನು ತಪಾಸಣೆಗೆಂದು ಪೊಲೀಸರು ತಡೆದಿದ್ದರು. ತಕ್ಷಣವೇ ಟ್ರಕ್ನಲ್ಲಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಬಳಿಕ ಪೊಲೀಸರು ಟ್ರಕ್ನಲ್ಲಿದ್ದ ಮೂವರು ಉಗ್ರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಟ್ರಕ್ ನಲ್ಲಿದ್ದ ಮೂವರು ಉಗ್ರರ ಹತ್ಯೆ
Follow Us