Monday, August 8, 2022

ಮಗುವಿನ ಲಿಂಗ ತಿಳಿಯಲು ಪತ್ನಿಯ ಹೊಟ್ಟೆಯನ್ನೇ ಸೀಳಿದ ಭೂಪ!

Follow Us

newsics.com
ಲಖನೌ: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ಪತ್ನಿಯ ಹೊಟ್ಟೆಯನ್ನೇ ಸೀಳಿದ ಬೀಭತ್ಸ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು, ಬರೇಲಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಉತ್ತರ ಪ್ರದೇಶದ ಬುಡಾನ್​ ಜಿಲ್ಲೆಯ ನೇಕ್​ಪುರ್’ನಲ್ಲಿ ಈ ಘಟನೆ ನಡೆದಿದ್ದು, ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದ ಗಂಡ ತನ್ನ ಪತ್ನಿಗೆ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಪತ್ನಿಯ ಗರ್ಭವನ್ನೇ ಚಾಕುವಿನಿಂದ ಸೀಳಿದ್ದಾನೆ. ನೇಕ್​ಪುರ್ ನಿವಾಸಿ ಪನ್ನಾಲಾಲ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಪನ್ನಾಲಾಲ್ ದಂಪತಿಗೆ ಈ ಹಿಂದೆ 5 ಹೆಣ್ಣಮಕ್ಕಳು ಜನಿಸಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಹಿಂದೆ ಸತತ 5 ಹೆಣ್ಣು ಮಕ್ಕಳಾದ್ದರಿಂದ ರೋಸಿಹೋಗಿದ್ದ ಪನ್ನಾಲಾಲ್ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಇಚ್ಛಿಸಿದ್ದ. ಹೀಗಾಗಿ ತನ್ನ 35 ವರ್ಷದ 7 ತಿಂಗಳ ಗರ್ಭಿಣಿ ಹೊಟ್ಟೆಯನ್ನು ಚಾಕುವಿನಿಂದ ಸೀಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪನ್ನಾಲಾಲ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ದಂತ ವೈದ್ಯೆ

newsics.com ಬೆಂಗಳೂರು: ತನ್ನ 9 ವರ್ಷದ ಮಗಳನ್ನು ನೇಣು ಬಿಗಿದು ಕೊಂದ ದಂತ ವೈದ್ಯೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಬೆಂಗಳೂರು ಬನಶಂಕರಿಯ ಕಾವೇರಿನಗರದ ಕೃಷ್ಣಾ ಗ್ರಾಂಡ್ ಬಳಿ ಈ ಘಟನೆ...

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ ಪೊಲೀಸರಿಗೆ ಈ ಸಂಬಂಧ ದೂರು ನೀಡಲಾಗಿದೆ. ಸುನಾಮಿ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...
- Advertisement -
error: Content is protected !!