newsics.com
ನವದೆಹಲಿ: ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ದೇಶದ ಎಲ್ಲ ಬ್ಯಾಂಕುಗಳು ತಮ್ಮ ಖಾತೆದಾರರ ಆಧಾರ್ ಸಂಖ್ಯೆಯನ್ನು ಅವರ ಬ್ಯಾಂಕ್ ಖಾತೆಗೆ ಜೋಡಿಸುವಂತೆ ನಿರ್ಮಲಾ ಸೀತಾರಾಮನ್ ಗಡುವು ನೀಡಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಕೇಂದ್ರ ಸರ್ಕಾರದ ಸೌಲಭ್ಯಗಳು ಜನರಿಗೆ ಮತ್ತಷ್ಟು ವೇಗವಾಗಿ ತಲುಪಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಮಾರ್ಚ್ 31ರ ವೇಳೆಗೆ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ.
ಮಂಗಳವಾರ ಭಾರತೀಯ ಬ್ಯಾಂಕ್ ಸಂಘದ 73ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಎಲ್ಲ ಬ್ಯಾಂಕ್ ಗಳು 2021ರ ಮಾರ್ಚ್ 31ರ ಒಳಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸುವುದು ಕಡ್ಡಾಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ದೇಶದಲ್ಲಿ ಕೊರೋನಾ ಸೋಂಕಿನ ಬಳಿಕ ಬ್ಯಾಂಕಿಂಗ್ ವಲಯ ಚೇತರಿಸಿಕೊಳ್ಳುತ್ತಿದೆ ಈ ನಿಟ್ಟಿನಲ್ಲಿ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬಾಸ್ಮತಿ ಅಕ್ಕಿ ಸಂಸ್ಕರಣಾ ಘಟಕ ‘ಬೆಸ್ಟ್ ಫುಡ್ಸ್’ ಮೇಲೆ ಸಿಬಿಐ ದಾಳಿ
ಆರ್.ಆರ್.ನಗರ, ಶಿರಾದಲ್ಲಿ ಬಿಜೆಪಿ ಜಯಭೇರಿ; ಕನ್ನಡದಲ್ಲೇ ಮೋದಿ ಶುಭಹಾರೈಕೆ
ಕೊರೋನಾಗೆ ಪೆಲೆಸ್ತೀನ್‌ನ ರಾಜತಾಂತ್ರಿಕ ಸಾಯಿಬ್ ಬಲಿ
ದಾವೂದ್ ಇಬ್ರಾಹಿಂನ ಆರು ಆಸ್ತಿ ಹರಾಜು