ನವದೆಹಲಿ: ಹೊಸ ವರ್ಷದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಆಘಾತ ಅನುಭವಿಸಿದೆ. ದೆಹಲಿ ವಿಧಾನಸಭೆಗೆ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಆಮ್ ಆದ್ಮಿ ಪಕ್ಷ ಮತ್ತೆ ಆಡಳಿತಕ್ಕೆ ಬರುವುದು ಬಹುತೇಕ ನಿಚ್ಚಳವಾಗಿದೆ. ಇದುವರೆಗಿನ ಮಾಹಿತಿ ಪ್ರಕಾರ ಆಮ್ ಆದ್ಮಿ ಪಕ್ಷ 56 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಕೇವಲ 14 ಕ್ಷೇತ್ರಗಳಲ್ಲಿ ಪಾರಮ್ಯ ಮೆರೆದಿದೆ. ಕಾಂಗ್ರೆಸ್ ಸೊನ್ನೆ ಸುತ್ತಿದೆ. ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರೇ ಅರವಿಂದ ಕ್ರೇಜಿವಾಲ್ ದಿಲ್ಲಿ ನಾಗರಿಕರ ದಿನ ನಿತ್ಯದ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದ್ದೇ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.