ನವದೆಹಲಿ: ಎಲ್ಲ ಸುದ್ದಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆಗಳು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜಯದ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇವಿಎಂ ಗಳನ್ನು ಭದ್ರವಾಗಿರಿಸಿರುವ ಕೊಠಡಿಗಳ ಮುಂದೆ ಕಾವಲಿರಲು ಆಪ್ ನಿರ್ಧರಿಸಿದೆ. ಯಾವುದೇ ಪಕ್ಷದ ಷಡ್ಯಂತ್ರ ವಿಫಲಗೊಳಿಸಲು ಮತ್ತು ಸುರಕ್ಷತೆ ಖಾತರಿಪಡಿಸಲು ಪಕ್ಷದ ಕಾರ್ಯಕರ್ತರು ಸತತ ನಿಗಾ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಮತದಾನ ಪೂರ್ಣಗೊಂಡ ಬಳಿಕ ನಡೆದ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಪಕ್ಷದ ದೆಹಲಿ ಘಟಕದ ಕಾರ್ಯ ವೈಖರಿ ಬಗ್ಗೆ ಅಪಸ್ವರ ವ್ಯಕ್ತವಾಯಿತು ಎಂದು ವರದಿಯಾಗಿದೆ.