newsics.com
ಶ್ರೀನಗರ: ನಟ ಅಕ್ಷಯ ಕುಮಾರ್ ಜಮ್ಮು ಕಾಶ್ಮೀರದ ಮುಂಚೂಣಿ ಸೇನಾ ನೆಲೆಗೆ ಭೇಟಿ ನೀಡಿ ಸೈನಿಕರ ಜತೆ ಕೆಲವು ಸಮಯ ಕಳೆದಿದ್ದಾರೆ.
ಕಾಶ್ಮೀರ ಕಣಿವೆಯ ಬಂಡಿಪೋರಾ ಜಿಲ್ಲೆಯ ಗುರೇಝ್ ಗೆ ಭೇಟಿ ನೀಡಿದ ಅಕ್ಷಯ ಕುಮಾರ್, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ದೇಶದ ಗಡಿ ಕಾಯುವ ವೀರ ಯೋಧರ ಸಾಹಸವನ್ನು ಅಕ್ಷಯ ಕುಮಾರ್ ಶ್ಲಾಘಿಸಿದರು.