newsics.com
ಚೆನ್ನೈ: ಶೂಟಿಂಗ್ ವೇಳೆ ಖ್ಯಾತ ನಟ ಪ್ರಕಾಶ್ ರೈ ಅವರ ಕೈಗೆ ಏಟು ಬಿದ್ದಿದ್ದು ,ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ತಮಿಳಿನ ಖ್ಯಾತ ನಟ ಧುನುಷ್ ಅವರ ಬಹು ನಿರೀಕ್ಷಿತ ಚಿತ್ರ ‘ತಿರುಚಿತ್ರಾಂಬಲಂ’ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್ ರೈ ಅವರ ಕೈಗೆ ಗಂಭೀರ ಗಾಯವಾಗಿದೆ. ಹೀಗಾಗಿ ಅವರ ವೈದ್ಯ ಸ್ನೇಹಿತ ಡಾ.ಗುರುವಾ ರೆಡ್ಡಿ ಅವರ ಸಲಹೆಯ ಮೇರೆಗೆ ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ಗೆ ತೆರಳುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಕುರಿತು ಪ್ರಕಾಶ್ ಅವರು ಟ್ವೀಟ್ ಮಾಡಿದ್ದು, ಸಣ್ಣ ಏಟು ಬಿದ್ದಿದೆ, ಹೀಗಾಗಿ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗಿ ಬರುತ್ತೇನೆ. ನಿಮ್ಮ ಹಾರೈಕೆ ನನ್ನ ಮೇಲೆ ಇರಲಿ ಎಂದಿದ್ದಾರೆ.