newsics.com
ಮುಂಬೈ: ಬಾಲಿವುಡ್ ನಟ ಆರ್ ಮಾಧವನ್ ಇತ್ತೀಚೆಗೆ ತಮ್ಮ ಹೊಸಚಿತ್ರದ ಚಿತ್ರೀಕರಣಕ್ಕೆಂದು ದುಬೈಗೆ ತೆರಳಿದ್ದಾರೆ. ಈ ವೇಳೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಬೇಸರದ ಪ್ರಯಾಣ ಎಂದಿದ್ದಾರೆ.
ಮಾಧವನ್ ಇಡೀ ವಿಮಾನದಲ್ಲಿ ಒಬ್ಬರೇ ಪ್ರಯಾಣಿಕರಾಗಿ ದುಬೈಗೆ ತೆರಳಿದ್ದಾರೆ.
ಕೊರೋನಾ ಕಾರಣದಿಂದ ಲಸಿಕೆ ಪಡೆದ ಹಾಗೂ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶವಿದೆ.
ಮಾಧವನ್ ತಮ್ಮ ‘ ಅಮೆರಿಕಿ ಪಂಡಿತ್’ ಎನ್ನುವ ಹೊಸ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಅತ್ತ ದುಬೈ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರಿಲ್ಲದೆ ಖಾಲಿಯಿರುವ ಫೋಟೋ ಹಂಚಿಕೊಂಡಿದ್ದು, ಸಾಂಕ್ರಾಮಿಕ ರೋಗದ ಕಷ್ಟದ ಸಮಯಗಳು ಶೀಘ್ರದಲ್ಲೇ ಕೊನೆಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ.