NEWSICS.COM
ಹೈದ್ರಾಬಾದ್: ರಕ್ತದೊತ್ತಡದಲ್ಲಿ ಏರುಪೇರಾಗಿ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಅವರನ್ನು ಇಂದು (ಡಿ.27) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಹೈದ್ರಾಬಾದ್ ನ ಅಪೋಲೊ ಆಸ್ಪತ್ರೆಗೆ ಡಿ.25ರಂದು ರಜಿನಿಕಾಂತ್ ದಾಖಲಾಗಿದ್ದರು. ಅವರ ರಕ್ತದೊತ್ತಡ ಸ್ಥಿರವಾಗಿದೆ, ಆರೋಗ್ಯವಾಗಿದ್ದಾರೆ. ಆದರೆ ಒತ್ತಡಕ್ಕೆ ಒಳಗಾಗಬಾರದು, 1ವಾರ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.