ಮುಂಬೈ: ನಟ ಶಾಹಿದ್ ಕಪೂರ್ ಅವರು ಈಗ ಜೆರ್ಸಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಚಿತ್ರದ ಶೂಟಿಂಗ್ ವೇಳೆ ಕ್ರಿಕೆಟ್ ಚೆಂಡು ಬಡಿದು ಶಾಹಿದ್ ಅವರಿಗೆ ಗಂಭೀರ ಗಾಯವಾಗಿದ್ದು,13 ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಶಾಹಿದ್ ಮುಖಕ್ಕೆ ಚೆಂಡು ಬಡಿದಿದ್ದರಿಂದ ಅವರ ತುಟಿಗೆ ಗಾಯವಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಂಡೀಗಢ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.
ಜೆರ್ಸಿ ಚಿತ್ರ ಕ್ರಿಕೆಟ್ ಕುರಿತಾದ ಚಿತ್ರವಾಗಿದ್ದರಿಂದ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಚಿತ್ರೀಕರಣ ವೇಳೆ ಚೆಂಡು ಬಡಿದು ಗಾಯವಾಗಿದೆ. ಚೆಂಡು ಬಡಿದಿದ್ದರಿಂದ ಅವರ ಮುಖ ಸಹ ಊದಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಟ ಶಾಹಿದ್ ಕಪೂರ್ ತುಟಿಗೆ ಹೊಲಿಗೆ
Follow Us